ಚಿತ್ರದುರ್ಗ: ಜಿಲ್ಲೆಯಲ್ಲಿ 149 ಜನರಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ. ಜಿಲ್ಲಾ ಆರೋಗ್ಯ ಇಲಾಖೆ ಘೋಷಣೆ ಮಾಡಿರುವ ಹೆಲ್ತ್ ಬುಲೆಟಿನ್ನಲ್ಲಿ 149 ಜನರಿಗೆ ಕೊರೊನಾ ತಗುಲಿರುವುದು ಖಾತ್ರಿಯಾಗಿದ್ದು ನಿನ್ನೆ 42 ಜನ ಬಿಡುಗಡೆಯಾಗಿದ್ದಾರೆ.
ಚಿತ್ರದುರ್ಗದಲ್ಲಿ 149 ಕೊರೊನಾ ಪ್ರಕರಣ ಪತ್ತೆ: ಸೋಂಕಿತರ ಸಂಖ್ಯೆ 3,046 ಕ್ಕೇರಿಕೆ - chitradurga corona news
ಚಿತ್ರದುರ್ಗ ಜಿಲ್ಲಾ ಆರೋಗ್ಯ ಇಲಾಖೆ ಘೋಷಣೆ ಮಾಡಿರುವ ಹೆಲ್ತ್ ಬುಲೆಟಿನ್ನಲ್ಲಿ 149 ಜನರಿಗೆ ಕೊರೊನಾ ತಗುಲಿರುವುದು ಖಾತ್ರಿಯಾಗಿದ್ದು, ನಿನ್ನೆ 42 ಜನ ಬಿಡುಗಡೆಯಾಗಿದ್ದಾರೆ.
ಚಿತ್ರದುರ್ಗ
ಚಿತ್ರದುರ್ಗ 38, ಹೊಸದುರ್ಗ 24, ಹಿರಿಯೂರು 22, ಹೊಳಲ್ಕೆರೆ 03, ಮೊಳಕಾಲ್ಮೂರು 39, ಚಳ್ಳಕೆರೆ 23, ಒಟ್ಟು 149 ಪ್ರಕರಣಗಳು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3,046 ಕ್ಕೆ ಏರಿಕೆಯಾಗಿದ್ದು, 1,768 ಜನ ಸೋಂಕಿನಿಂದ ಗುಣಮುಖರಾದರೆ. ಇನ್ನುಳಿದ 1,242 ಜನ ಕೋವಿಡ್ ಕೇರ್ ಸೆಂಟರ್ ಸೇರಿದಂತೆ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಜಿಲ್ಲೆಯಲ್ಲಿ ಒಟ್ಟು 35 ಜನ ಕೊನೆಯುಸಿರೆಳೆದಿದ್ದು, ಇತರೆ ಕಾರಣದಿಂದ ಒಬ್ಬರು ಸಾವನ್ನಪ್ಪಿದ್ದಾರೆ.