ಚಿತ್ರದುರ್ಗ:ಕೊರೊನಾ ಸೋಂಕಿನಿಂದ ಗುಣಮುಖರಾದ 14 ಜನರನ್ನು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಪಾಲಾಕ್ಷ ನೇತೃತ್ವದಲ್ಲಿಂದು ಬಿಡುಗಡೆ ಮಾಡಲಾಯಿತು.
ಚಿತ್ರದುರ್ಗದಲ್ಲಿ 14 ಮಂದಿ ಕೊರೊನಾ ಸೋಂಕಿತರು ಗುಣಮುಖ - ಚಿತ್ರದುರ್ಗ ಕೊರೊನಾ ನ್ಯೂಸ್
ಇಂದು ಕೊರೊನಾ ಸೋಂಕಿನಿಂದ 14 ಮಂದಿ ಗುಣಮುಖರಾಗಿ ಮನೆ ಸೇರಿದ್ದಾರೆ. ನೆರೆಹೊರೆಯವರು ಕೀಳಾಗಿ ನೋಡಿದರೆ ಹಾಗೂ ಯಾವುದೇ ತೊಂದರೆ ಎದುರಾದಲ್ಲಿ ನಮಗೆ ತಿಳಿಸಿ ಎಂದು ಡಿಹೆಚ್ಒ ಡಾ. ಪಾಲಾಕ್ಷ, ಸೋಂಕಿನಿಂದ ಗುಣಮುಖರಾದವರಿಗೆ ಧೈರ್ಯ ತುಂಬಿದರು.

ಸೋಂಕಿತರೊಂದಿಗಿನ ಪ್ರಾಥಮಿಕ ಸಂಪರ್ಕ ಸೇರಿದಂತೆ ಬೆಂಗಳೂರು ಪ್ರಯಾಣ ಹಿನ್ನೆಲೆ ಹೊಂದಿದ್ದ 14 ಮಂದಿಗೆ ಕೊರೊನಾ ತಗುಲಿದ್ದು, ಚಿಕಿತ್ಸೆ ಪಡೆದು ಗುಣಮುಖರಾಗಿ ಇಂದು ಬಿಡುಗಡೆಯಾಗಿದ್ದಾರೆ. ಗುಣಮುಖರಾದ 14 ಮಂದಿಯನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಆ್ಯಂಬುಲೆನ್ಸ್ ಮೂಲಕ ಮನೆಗೆ ಕಳುಹಿಸಿಕೊಡಲಾಯಿತು.
ಬಿಡುಗಡೆಯಾದ 14 ಮಂದಿಗೂ ಮುಂಜಾಗ್ರತಾ ಕ್ರಮವಾಗಿ ಮನೆಯಲ್ಲೇ 14 ದಿನಗಳ ಕಾಲ ಕ್ವಾರಂಟೈನ್ನಲ್ಲಿರುವಂತೆ ಕೈಗೆ ಸೀಲ್ ಹಾಕಲಾಯಿತು. ನೆರೆಹೊರೆಯವರು ಕೀಳಾಗಿ ನೋಡಿದರೆ ಹಾಗೂ ಯಾವುದೇ ತೊಂದರೆ ಎದುರಾದಲ್ಲಿ ನಮಗೆ ತಿಳಿಸಿ ಎಂದು ಡಿಹೆಚ್ಒ ಡಾ. ಪಾಲಾಕ್ಷ, ಸೋಂಕಿನಿಂದ ಗುಣಮುಖರಾದವರಿಗೆ ಧೈರ್ಯ ತುಂಬಿದರು.