ಚಿತ್ರದುರ್ಗ: ಜಿಲ್ಲೆಯಲ್ಲಿಂದು 13 ಜನರಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ. ರಾಜ್ಯ ಆರೋಗ್ಯ ಇಲಾಖೆ ಘೋಷಣೆ ಮಾಡಿರುವ ಹೆಲ್ತ್ ಬುಲೆಟಿನ್ನಲ್ಲಿ 13 ಜನರಿಗೆ ಕೊರೊನಾ ತಗುಲಿರುವುದು ಖಾತ್ರಿಯಾಗಿದೆ.
ಚಿತ್ರದುರ್ಗದಲ್ಲಿಂದು 13 ಕೊರೊನಾ ಪ್ರಕರಣ ಪತ್ತೆ : ಸೋಂಕಿತರ ಸಂಖ್ಯೆ 813 ಕ್ಕೇರಿಕೆ - Chitradurga Corona News
ಚಿತ್ರದುರ್ಗ ಜಿಲ್ಲೆಯಲ್ಲಿಂದು 13 ಜನರಿಗೆ ಕೊರೊನಾ ಪಾಸಿಟಿವ್ ದೃಢವಾಗಿದ್ದು, ಹೆಲ್ತ್ ಬುಲೆಟಿನ್ನಲ್ಲಿ 13 ಜನರಿಗೆ ಕೊರೊನಾ ತಗುಲಿರುವುದು ಖಾತ್ರಿಯಾಗಿದೆ.

ಚಿತ್ರದುರ್ಗ
ಹೊಳಲ್ಕೆರೆ 02, ಹಿರಿಯೂರು ತಾಲೂಕಿನಲ್ಲಿ 01, ಮೊಳಕಾಲ್ಮೂರು 09, ಚಳ್ಳಕೆರೆ 01 ಒಟ್ಟು 13 ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಕೊರೊನಾ ರಣಕೇಕೆ ಮುಂದುವರೆದಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 813 ಕ್ಕೆ ಏರಿಕೆಯಾಗಿದ್ದು, 374 ಜನ ಸೋಂಕಿನಿಂದ ಗುಣಮುಖರಾದರೇ ಇನ್ನುಳಿದ 423 ಜನ ಕೋವಿಡ್ ಕೇರ್ ಸೆಂಟರ್ ಸೇರಿದ್ದಂತೆ ಕೋವಿಡ್- 19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 16 ಜನ ಕೊನೆಯುಸಿರೆಳೆದಿದ್ದು, ಹಾಗೂ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವುದ್ದರಿಂದ ಜನರಲ್ಲಿ ಭಯದ ವಾತಾವರಣ ಮೂಡಿದೆ.