ಚಿತ್ರದುರ್ಗ :ಜಿಲ್ಲೆಯಲ್ಲಿ ಇಂದು 125 ಜನರಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ. ಜಿಲ್ಲಾ ಆರೋಗ್ಯ ಇಲಾಖೆ ಘೋಷಣೆ ಮಾಡಿರುವ ಹೆಲ್ತ್ ಬುಲೆಟಿನ್ಲ್ಲಿ 125 ಜನರಿಗೆ ಕೊರೊನಾ ತಗುಲಿರುವುದು ಖಾತ್ರಿಯಾಗಿದ್ದು, ಇಂದು 250 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಚಿತ್ರದುರ್ಗದಲ್ಲಿ 125 ಜನರಲ್ಲಿ ಕೊರೊನಾ ಪಾಸಿಟಿವ್ ದೃಢ; ಸೋಂಕಿತರ ಸಂಖ್ಯೆ 5356ಕ್ಕೆ ಏರಿಕೆ - positive cases found in Chitradurga
ಚಿತ್ರದುರ್ಗ ಜಿಲ್ಲೆಯಲ್ಲಿ ಕೊರೊನಾದಿಂದ ಇಲ್ಲಯವರೆಗೆ ಒಟ್ಟು 33 ಜನ ಮೃತಪಟ್ಟ ವರದಿಯಾಗಿದೆ. ಇನ್ನು ಇಂದು ಒಂದೇ 125 ಜನರಲ್ಲಿ ಸೋಂಕು ಪತ್ತೆಯಾಗಿದೆ.
ಸೋಂಕು ಪತ್ತೆ
ಚಿತ್ರದುರ್ಗ 62, ಹೊಳಲ್ಕೆರೆ 19, ಚಳ್ಳಕೆರೆ 13, ಹಿರಿಯೂರು 05, ಹೊಸದುರ್ಗ13, ಮೊಳಕಾಲ್ಮೂರು 13 ಸೇರಿದಂತೆ ಒಟ್ಟು 125 ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಕೊರೊನಾ ರಣಕೇಕೆ ಮುಂದುವರೆದಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 5356ಕ್ಕೆ ಏರಿಕೆಯಾಗಿದ್ದು, 4061 ಜನ ಸೋಂಕಿನಿಂದ ಗುಣಮುಖರಾದರೆ, ಇನ್ನುಳಿದ 1262 ಜನ ಕೋವಿಂಡ್ ಕೇರ್ ಸೆಂಟರ್ ಸೇರಿದಂತೆ ಕೋವಿಂಡ್ 19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 33 ಜನ ಕೊರೊನಾದಿಂದ ಮೃತಪಟ್ಟಿದ್ದು ಇತರೆ ಕಾರಣದಿಂದ ಒಬ್ಬರು ಸಾವನ್ನಪ್ಪಿದ್ದಾರೆ.