ಚಿತ್ರದುರ್ಗ:ಶಾಲಾ ನಾಟಕಕ್ಕಾಗಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಗಲ್ಲಿಗೇರಿಸುವ ದೃಶ್ಯವನ್ನು ಅಭ್ಯಾಸ ಮಾಡುವಾಗ ಬಾಲಕ ನೇಣು ಬಿಗಿದು ಸಾವನ್ನಪ್ಪಿದ್ದಾನೆ. ಶನಿವಾರ ರಾತ್ರಿ ಘಟನೆ ಸಂಭವಿಸಿದ್ದು, 12 ವರ್ಷದ ಸಂಜಯ್ ಗೌಡ ಪ್ರಾಣ ಕಳೆದುಕೊಂಡಿರುವ ವಿದ್ಯಾರ್ಥಿ.
ಭಗತ್ ಸಿಂಗ್ ಮರಣದಂಡನೆ ರಿಹರ್ಸಲ್.. ಚಿತ್ರದುರ್ಗದಲ್ಲಿ ಕುತ್ತಿಗೆಗೆ ಹಗ್ಗ ಬಿಗಿದು ವಿದ್ಯಾರ್ಥಿ ದುರಂತ ಅಂತ್ಯ - ಈಟಿವಿ ಭಾರತ ಕನ್ನಡ
ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಗಲ್ಲಿಗೇರಿಸುವ ದೃಶ್ಯವನ್ನು ಮನೆಯಲ್ಲಿ ಯಾರು ಇಲ್ಲದಿದ್ದಾಗ ಅಭ್ಯಾಸ ಮಾಡುವ ವೇಳೆ ಆಕಸ್ಮಿಕವಾಗಿ ನೇಣು ಬಿಗಿದು 12 ವರ್ಷದ ಬಾಲಕ ಸಾವನ್ನಪಪ್ಪಿದ್ದಾನೆ.

ಭಗತ್ ಸಿಂಗ್ ಮರಣದಂಡನೆ ದೃಶ್ಯ ಅಭ್ಯಾಸ
ಖಾಸಗಿ ಶಾಲೆಯ ಏಳನೇ ತರಗತಿ ವಿದ್ಯಾರ್ಥಿಯಾಗಿದ್ದ ಬಾಲಕನಿಗೆ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಪ್ರಮುಖ ಪಾತ್ರವನ್ನು ವಹಿಸಲು ನಿಯೋಜಿಸಲಾಗಿತ್ತು. ಮನೆಯಲ್ಲಿ ಕುಟುಂಬಸ್ಥರು ಇಲ್ಲದಿದ್ದಾಗ ಬಾಲಕ ನಾಟಕಕ್ಕೆ ತಾಲೀಮು(ರಿಹರ್ಸಲ್) ನಡೆಸುತ್ತಿದ್ದಾಗ ಆಕಸ್ಮಿಕವಾಗಿ ಕುತ್ತಿಗೆಗೆ ಹಗ್ಗ ಬಿಗಿದು ಮೃತಪಟ್ಟಿದ್ದಾನೆ.
ಇದನ್ನೂ ಓದಿ :ಮನೆಯಲ್ಲಿ ಒಂದೇ ಕುಟುಂಬದ ನಾಲ್ವರು ಕೊಳೆತ ಸ್ಥಿತಿಯಲ್ಲಿ ಪತ್ತೆ.. ಕಾರಣ ನಿಗೂಢ!