ಕರ್ನಾಟಕ

karnataka

ETV Bharat / state

ಮತ್ತೆ ಜೆಡಿಎಸ್ ಸೇರ್ಪಡೆಯಾದ ವೈ.ಎಸ್.​ವಿ ದತ್ತ - ಧನಂಜಯ ಅವರಿಗೆ ಟಿಕೆಟ್ ಘೋಷಣೆ

ವೈಎಸ್​ವಿ ದತ್ತ ಅವರನ್ನು ಶಾಸಕರನ್ನಾಗಿ ಮಾಡಲೇಬೇಕೆಂದು ದೇವೇಗೌಡರು ತಿಳಿಸಿದ್ದಾರೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ತಿಳಿಸಿದ್ದಾರೆ.

ಜೆಡಿಎಸ್​ಗೆ ಸೇರ್ಪಡೆಗೊಂಡ ವೈಎಸ್​ವಿ ದತ್ತ
ಜೆಡಿಎಸ್​ಗೆ ಸೇರ್ಪಡೆಗೊಂಡ ವೈಎಸ್​ವಿ ದತ್ತ

By

Published : Apr 13, 2023, 7:07 PM IST

ಮಾಜಿ ಸಚಿವ ಹೆಚ್​ ಡಿ ರೇವಣ್ಣ ಅವರು ಮಾತನಾಡಿದರು

ಚಿಕ್ಕಮಗಳೂರು :ಮಾಜಿ ಶಾಸಕ ವೈ.ಎಸ್.​ವಿ ದತ್ತ ಅವರ ಯಗಟಿಯ ಮನೆಗೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಮತ್ತು ಸಂಸದ ಪ್ರಜ್ವಲ್ ರೇವಣ್ಣ ಭೇಟಿ ನೀಡಿದ್ದು, ಅವರ ಸಮ್ಮುಖದಲ್ಲಿ ದತ್ತ ಮತ್ತೆ ಜೆಡಿಎಸ್​ಗೆ ಮರಳಿ ಸೇರ್ಪಡೆಯಾದರು. ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಯಗಟಿಯಲ್ಲಿ ದತ್ತ ನಿವಾಸವಿದೆ.

ಹೆಚ್.ಡಿ.ರೇವಣ್ಣ ಮಾತನಾಡಿ, ಕಡೂರು ಕ್ಷೇತ್ರದ ಮೇಲೆ ದೇವೇಗೌಡರಿಗೆ ಬಹಳ ಅಭಿಮಾನ. ಜೆಡಿಎಸ್ ಪಕ್ಷದ ಬೆಳವಣಿಗೆಯಲ್ಲಿ ದತ್ತ ಅವರ ಪಾಲೇನು ಎಂಬುದನ್ನು ನಾವೆಲ್ಲರೂ ಬಲ್ಲೆವು. ಸ್ವಂತ ದೇವೇಗೌಡರು ಕೈ ಬಿಡಬಾರದು ಎಂದು ಹೇಳಿದ್ದಾರೆ. ಚುನಾವಣೆಗೆ ಸಮಯ ಹೆಚ್ಚಿಲ್ಲ. ಕಡೂರಿನಲ್ಲಿ ದತ್ತ ಅವರೇ ಜೆಡಿಎಸ್ ಅಭ್ಯರ್ಥಿಯಾಗಬೇಕೆಂದು ಎಲ್ಲರೂ ಒಮ್ಮತದ ನಿರ್ಣಯ ಮಾಡಿ. ಜನತೆ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಇದೇ 18ನೆ ತಾರೀಖು ದತ್ತ ನಾಮಪತ್ರ ಸಲ್ಲಿಕೆ ಮಾಡುತ್ತಾರೆ. ಅಂದು ಎಷ್ಟೇ ಕಷ್ಟ ಆದ್ರೂ ದೇವೇಗೌಡರು ಬರುತ್ತಾರೆ. ನಾನು ಬದುಕಿರುವವರೆಗೆ ದತ್ತನ ಕೈ ಬಿಡಬಾರದು ಎಂದು ಹೇಳಿದ್ದಾರೆ. ನೀವು ಬೇರೆ ಯೋಚನೆ ಮಾಡಬೇಡಿ, ದೇವೇಗೌಡರ ಮಾತನ್ನು ನಾನು, ದತ್ತ, ನೀವು ಎಲ್ಲಾ ಪಾಲಿಸಬೇಕು ಎಂದರು.

ಸಂಸದ ಪ್ರಜ್ವಲ್ ಮಾತನಾಡಿ, ಕಾಂಗ್ರೆಸ್ ಪಕ್ಷ ಕೇವಲ ದತ್ತಣ್ಣ ಅವರನ್ನು ನಂಬಿಸಿ ಮೋಸ ಮಾಡಿಲ್ಲ. ಅವರ ಅಭಿಮಾನಿಗಳಿಗೂ ಮೋಸ ಮಾಡಿದೆ. ಇದನ್ನು ಈ ಹಿಂದೆಯೇ ದತ್ತ ಅವರಿಗೆ ಹೇಳಿದ್ದೆ. ಆದರೆ ಹಲವಾರು ಘಟನೆಗಳು ನಡೆದು ಹೋದವು. ಅವರೂ ಸಹ ನೋವು ಅನುಭವಿಸಿದ್ದಾರೆ. ಅವರು ದೂರ ಹೋದಾಗ ನಮಗೂ ನೋವಾಯಿತು. ಈಗ ಅವೆಲ್ಲವನ್ನು ಮರೆತು ನಾವೆಲ್ಲ ಮತ್ತೆ ಪಕ್ಷಕ್ಕೆ ಸ್ವಾಗತಿಸಿದ್ದೇವೆ ಎಂದರು.

ನಾವು, ನಮ್ಮ ಕುಟುಂಬ, ಪಕ್ಷ ದತ್ತ ಅವರ ಜೊತೆಗಿದ್ದೇವೆ. ಈ ಬಗ್ಗೆ ಯಾವುದೇ ಅನುಮಾನ ಬೇಡ. ಇದೇ ಸಂಬಂಧವನ್ನು ಶಾಶ್ವತವಾಗಿ ಉಳಿಸಿಕೊಳ್ಳೋಣ. ದೇವೇಗೌಡರ ಮಾರ್ಗದರ್ಶನದಂತೆ ದತ್ತರನ್ನು ನಾವೆಲ್ಲರೂ ಸೇರಿ ಉಳಿಸಿಕೊಳ್ಳುತ್ತೇವೆ. ಅಭಿಮಾನಿಗಳು ನಂಬಿಕೆಯಿಟ್ಟು ಪಕ್ಷಕ್ಕೆ ಕಳುಹಿಸಿಕೊಡಿ. ಯಾವುದೇ ರೀತಿಯಲ್ಲಿಯೂ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಪ್ರಜ್ವಲ್ ರೇವಣ್ಣ ಹೇಳಿದರು.

ಈಗಾಗಲೇ ಧನಂಜಯ ಅವರಿಗೆ ಟಿಕೆಟ್ ಘೋಷಣೆ ಮಾಡಿದ್ದು, ಅವರ ಮುಂದಿನ ನಡೆ ಏನು ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ :'ಅಭಿಮಾನಿಗಳೇ ನನ್ನ ಶಕ್ತಿ, ಟವೆಲ್‌ ನನ್ನ ಚಿಹ್ನೆ': ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದ ವೆ.ಎಸ್‌.ವಿ ದತ್ತ

ABOUT THE AUTHOR

...view details