ಕರ್ನಾಟಕ

karnataka

ETV Bharat / state

'ಅಭಿಮಾನಿಗಳೇ ನನ್ನ ಶಕ್ತಿ, ಟವೆಲ್‌ ನನ್ನ ಚಿಹ್ನೆ': ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದ ವೆ.ಎಸ್‌.ವಿ ದತ್ತ - ಮಾಜಿ ಶಾಸಕ ವೈ ಎಸ್ ವಿ ದತ್ತಾ

ಕಡೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ನಂತರ ವೈಎಸ್‌ವಿ ದತ್ತ ಸ್ವಾಭಿಮಾನಿ ಸಮಾವೇಶದ ಹೆಸರಲ್ಲಿ ಕಾಂಗ್ರೆಸ್ ವಿರುದ್ಧ ಬಂಡಾಯವೆದ್ದಿದ್ದಾರೆ.

YSV Dutta at Swabhimani Samavesh
ಸ್ವಾಭಿಮಾನಿ ಸಮಾವೇಶದಲ್ಲಿ ವೈ ಎಸ್‌ ವಿ ದತ್ತ

By

Published : Apr 9, 2023, 11:00 PM IST

ಚಿಕ್ಕಮಗಳೂರು: ಮೂರು ದಿನಗಳ ಹಿಂದೆ ಕಾಂಗ್ರೆಸ್ ಟಿಕೆಟ್ ಘೋಷಣೆ ಆಗುತ್ತಿದ್ದಂತೆ ಮುನಿಸಿಕೊಂಡಿದ್ದ ದತ್ತ, ಸ್ವಾಭಿಮಾನಿ ಸಮಾವೇಶದ ಹೆಸರಲ್ಲಿ ಕಾಂಗ್ರೆಸ್ ವಿರುದ್ಧ ಬಂಡಾಯ ಕಹಳೆ ಮೊಳಗಿಸಿದ್ದಾರೆ. ಸಭೆ ಮೇಲೆ ಸಭೆ, ಜಾತಿವಾರು ಸಭೆಗಳನ್ನು ನಡೆಸಿರುವ ಅವರು ಮುಂದಿನ ರಾಜಕೀಯ ಭವಿಷ್ಯಕ್ಕಾಗಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.

ಕಾರ್ಯಕರ್ತರು ಹಾಗೂ ಅಭಿಮಾನಿಗಳೇ ನನ್ನ ಶಕ್ತಿ. ಟವಲ್ ನನ್ನ ಚಿಹ್ನೆಯೆಂದು ಭಾವನಾತ್ಮಕವಾಗಿ ಕಾರ್ಯಕರ್ತರ ನಡುವೆ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುತ್ತೇನೆ ಎಂದು ದತ್ತ ಇಂದು ಘೋಷಣೆ ಮಾಡಿದ್ದಾರೆ. ನಿನ್ನೆಯಿಂದ ಕಾಂಗ್ರೆಸ್‌ನಿಂದ ಬಂಡಾಯ ಎದ್ದಿರುವ ದತ್ತಾ ಮೇಷ್ಟ್ರ ಮನವೊಲಿಸಲು ಸಿದ್ದರಾಮಯ್ಯ, ಸುರ್ಜೆವಾಲ ರಾಜ್ಯ ಹಾಗೂ ರಾಷ್ಟ್ರ ನಾಯಕರು ಪ್ರಯತ್ನಿಸಿದ್ದರು. ಯಾವುದೇ ಫೋನ್ ಕರೆ ಸ್ವೀಕರಿಸದೇ ಇದೀಗ ಕಾಂಗ್ರೆಸ್​ಗೆ ಬಂಡಾಯದ ಬಿಸಿ ಮುಟ್ಟಿಸಲು ಮಂದಾಗಿದ್ದಾರೆೆ.

ಕಡೂರು ನಗರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸ್ವಾಭಿಮಾನಿ ಸಭೆಗೆ ಕ್ಷೇತ್ರದಾದ್ಯಂತ ನಾಲ್ಕು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಹಾಗೂ ದತ್ತ ಅಭಿಮಾನಿಗಳು ಆಗಮಿಸಿದ್ದರು. ಈ ವೇಳೆ ಮಾತಿಗಿಳಿದ ದತ್ತ, ಪಕ್ಷೇತರ ಅಭ್ಯರ್ಥಿಯೆಂದು ಘೋಷಣೆ ಮಾಡಿ, ಟವಲ್ ಹಿಡಿದು ಭಿಕ್ಷೆ ಬೇಡುತ್ತಿದ್ದಂತೆ ಅಭಿಮಾನಿಗಳು ಮುಖಂಡರು ಹತ್ತು ಸಾವಿರ, ಎರಡು ಲಕ್ಷದವರೆಗೆ ಹಣ ನೀಡಿದ್ದಾರೆ. ಅಭಿಮಾನಿಗಳ ಹಣದಿಂದ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಅಂತ ದತ್ತಾ ಘೋಷಿಸಿದರು.

ಇದನ್ನೂಓದಿ:ನವದೆಹಲಿಯಲ್ಲಿ ಕೇಂದ್ರ ಸಂಸದೀಯ ಮಂಡಳಿ ಸಭೆ: ಯಾವುದೇ ಕ್ಷಣದಲ್ಲೂ ಬಿಜೆಪಿ ಮೊದಲ ಪಟ್ಟಿ ಬಿಡುಗಡೆ

ABOUT THE AUTHOR

...view details