ಚಿಕ್ಕಮಗಳೂರು: ಕೊರೊನಾ ವೈರಸ್ಗೆ ಹೆದರಿ ಎರಡು ದಿನಗಳ ಹಿಂದೆ ಕಾಡು ಸೇರಿದ್ದ ಯುವಕರಿಗೆ ಅರಣ್ಯಾಧಿಕಾರಿಗಳು ಬುದ್ಧಿ ಹೇಳಿ ಮನೆಗೆ ಕಳುಹಿಸಿದ್ದಾರೆ.
ಕೊರೊನಾಗೆ ಹೆದರಿ ಕಾಡು ಸೇರಿದ್ದ ಯುವಕರು: ಬುದ್ಧಿ ಹೇಳಿ ಮನೆಗೆ ಬಿಟ್ಟ ಅರಣ್ಯಾಧಿಕಾರಿಗಳು! - ಕಾಡಿನಲ್ಲಿದ್ದ ಯುವಕರಿಗೆ ಎಚ್ವರಿಕೆ
ಮಹಾಮಾರಿ ಕೊರೊನಾ ಎಲ್ಲರನ್ನು ಬೆಚ್ಚಿಬೀಳುವಂತೆ ಮಾಡಿದೆ. ಕೆಲ ಮಂದಿ ಈ ಸೋಂಕಿಗೆ ಹೆದರಿ ಏನೇನೋ ಅವಾಂತರ ಮಾಡಿಕೊಳ್ಳುತ್ತಿದ್ದಾರೆ. ಇಂಥದ್ದೊಂದು ಘಟನೆ ಚಿಕ್ಕಮಗಳೂರಿನಲ್ಲೂ ನಡೆದಿದೆ.
![ಕೊರೊನಾಗೆ ಹೆದರಿ ಕಾಡು ಸೇರಿದ್ದ ಯುವಕರು: ಬುದ್ಧಿ ಹೇಳಿ ಮನೆಗೆ ಬಿಟ್ಟ ಅರಣ್ಯಾಧಿಕಾರಿಗಳು! ಕಾಡು ಸೇರಿದ್ದ ಯುವಕರು](https://etvbharatimages.akamaized.net/etvbharat/prod-images/768-512-6598124-thumbnail-3x2-yugyu.jpg)
ಕಾಡು ಸೇರಿದ್ದ ಯುವಕರು
ಜಿಲ್ಲೆಯ ಮೂಡಿಗೆರೆ ತಾಲೂಕಿನ ಮರ್ಕಲ್ ಗ್ರಾಮದ ಎಂಟು ಜನ ಯುವಕರು ಕೊರೊನಾ ವೈರಸ್ಗೆ ಹೆದರಿ ಅಡುಗೆ ಸಾಮಾನುಗಳನ್ನು ತೆಗೆದುಕೊಂಡು ಅರಣ್ಯದಲ್ಲಿ ವಾಸ ಮಾಡಲು ಹೊರಟಿದ್ದರು. ಈ ವಿಚಾರ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಬಂದ ಕೂಡಲೇ ಸಿಬ್ಬಂದಿ ಅರಣ್ಯಕ್ಕೆ ತೆರಳಿ, ಕಾಡಿನಲ್ಲಿದ್ದ ಯುವಕರಿಗೆ ಎಚ್ವರಿಕೆ ನೀಡಿದ್ದಾರೆ. ಅಲ್ಲದೆ ಅವರಿಂದ ಮತ್ತೊಮ್ಮೆ ಕಾಡಿಗೆ ಬರೋದಿಲ್ಲ ಎಂದು ಮುಚ್ಚಳಿಕೆ ಬರೆಸಿಕೊಂಡು ಮನೆಗೆ ಕಳುಹಿಸಿದ್ದಾರೆ.
ಕೊರೊನಾ ವೈರಸ್ಗೆ ಹೆದರಿ ಕಾಡು ಸೇರಿದ್ದ ಯುವಕರು
ಎರಡು ದಿನಗಳ ಹಿಂದೆ ಚಾರ್ಮಾಡಿ ಘಾಟಿಯ ಬಪ್ಲಿ ಅರಣ್ಯ ಪ್ರದೇಶಕ್ಕೆ ಹೋಗಿ ಈ ಯುವಕರು ಅಲ್ಲಿಯೇ ವಾಸವಾಗಿದ್ದರು.