ಚಿಕ್ಕಮಗಳೂರು:ಕಾಡು ಕೋಣವನ್ನು ಕೆಣಕಲು ಹೋದ ಯುವಕರ ಗುಂಪೊಂದು ಅದು ಬೆನ್ನಟ್ಟಿ ಬಂದಾಗ ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ.
ಕಾಡು ಕೋಣವನ್ನು ಕೆಣಕಲು ಹೋಗಿ ಯುವಕರು ಹೈರಾಣು - ವಿಡಿಯೋ ವೈರಲ್ - ಜಯಪುರ ಸಮೀಪದ ಧರೆಕೊಪ್ಪ
ಕೊಪ್ಪ ತಾಲೂಕಿನಲ್ಲಿ ಸುಮ್ಮನೆ ಬರುತ್ತಿದ್ದ ಕಾಡುಕೋಣವನ್ನು ಕೆಣಕಿದ ಯುವಕರ ಗುಂಪೊಂದು ಅದು ಬೆನ್ನಟ್ಟಿ ಬಂದಾಗ ದಿಕ್ಕಾಪಾಲಾಗಿ ಓಡಿದ್ದಾರೆ.
ಕಾಡು ಕೋಣವನ್ನು ಕೆಣಕಲು ಹೋಗಿ ಯುವಕರು ಹೈರಾಣು..ವಿಡಿಯೋ ವೈರಲ್
ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಸಮೀಪದ ಧರೆಕೊಪ್ಪದ ಗದ್ದೆಯಲ್ಲಿ ಸುಮ್ಮನೆ ಬರುತ್ತಿದ್ದ ಕಾಡುಕೋಣವನ್ನು ಯುವಕರು ಕೆಣಕಿದ್ದಾರೆ. ಇದರಿಂದ ರೊಚ್ಚಿಗೆದ್ದ ಕಾಡುಕೋಣ ಸಿಟ್ಟಿನಿಂದ ಬೆನ್ನಟ್ಟಿ ಬಂದಾಗ ಎದ್ನೋ-ಬಿದ್ನೊ ಎಂದು ಓಡಿ ಹೋಗಿ ಅಂಗಡಿಯೊಂದರ ಬಾಗಿಲು ಮುಚ್ಚಿಕೊಂಡಿದ್ದಾರೆ.
ಕಾಡುಕೋಣ ಬೆನ್ನಟ್ಟಿ ಬರುತ್ತಿರುವ ದೃಶ್ಯವನ್ನು ಯುವಕರು ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.