ಕರ್ನಾಟಕ

karnataka

ETV Bharat / state

ಭದ್ರಾ ಹಿನ್ನೀರಲ್ಲಿ ಈಜಲು ಹೋದ ಯುವಕ ಸಾವು

ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರ ತಾಲೂಕಿನ ಮಾರಿದಿಬ್ಬ ಬಳಿ ಯುವಕನೊಬ್ಬ ಈಜಲು ಹೋಗಿ, ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ.

ಯುವಕ ನೀರಿನಲ್ಲಿ ಮುಳುಗಿ ಸಾವು
ಯುವಕ ನೀರಿನಲ್ಲಿ ಮುಳುಗಿ ಸಾವು

By

Published : Apr 1, 2021, 4:06 PM IST

ಚಿಕ್ಕಮಗಳೂರು: ಈಜಲು ಹೋದ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಎನ್.ಆರ್ ಪುರ ತಾಲೂಕಿನ ಮಾರಿದಿಬ್ಬ ಬಳಿ ನಡೆದಿದೆ.

ಭದ್ರಾ ಹಿನ್ನೀರಿನಲ್ಲಿ ಈಜಲು ಹೋದ ಯುವಕ

ಸ್ನೇಹಿತರ ಜೊತೆ ಈಜಲು ತೆರಳಿದಾಗ ಈ ಅವಘಡ ನಡೆದಿದೆ. ಸಲ್ಮಾನ್ (18) ನೀರು ಪಾಲಾಗಿರುವ ಯುವಕ. ಭದ್ರಾ ಹಿನ್ನೀರಿನಲ್ಲಿ ಈಜಲು ತೆರಳಿದಾಗ ನೀರುಪಾಲು ಆಗಿದ್ದಾನೆ.

ಇದನ್ನೂ ಓದಿ: ಟೈಯರ್ ಸ್ಫೋಟಗೊಂಡು ಅಪಘಾತ: ಕೃಷ್ಣ ಜಲಭಾಗ್ಯ ಮಂಡಳಿ ಅಧಿಕಾರಿ ಸೇರಿ ನಾಲ್ವರು ಸಾವು

ಸ್ಥಳಕ್ಕೆ ಎನ್.ಆರ್.ಪುರ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದು, ಸ್ಥಳೀಯರ ಸಹಾಯದಿಂದ ಕಾಣೆಯಾಗಿರುವ ಯುವಕನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಯುವಕ ನೀರಿನಲ್ಲಿ ಮುಳುಗುತ್ತಿರುವ ವಿಡಿಯೋ ಮೊಬೈಲ್​ನಲ್ಲಿ ಸೆರೆ ಹಿಡಿಯಲಾಗಿದೆ.

ABOUT THE AUTHOR

...view details