ಚಿಕ್ಕಮಗಳೂರು :ಗಣೇಶ ಹಬ್ಬದ ದಿನ ಯುವಕನೋರ್ವ ಗಣೇಶನಿಗೆ ಜೀವಂತ ಇರುವ ಇಲಿಯನ್ನು ಅರ್ಪಿಸಿರುವ ವಿಲಕ್ಷಣ ಘಟನೆ ನಡೆದಿದೆ.
ಜಿಲ್ಲೆಯ ಮೂಡಿಗೆರೆ ತಾಲೂಕಿನ ಮರ್ಕಲ್ ಗ್ರಾಮದ ಕೃಷಿ ಪ್ರದೇಶದಲ್ಲಿ ಬೆಳೆಗಳಿಗೆ ಇಲಿಗಳ ವಿಪರೀತ ಹಾವಳಿ. ಇಲಿಗಳಿಂದ ಆಗುತ್ತಿರುವ ಬೆಳೆ ಹಾನಿಯಿಂದ ಬೇಸತ್ತ ನಿತಿನ್ ಎಂಬ ಯುವಕ ಇಲಿ ಹಿಡಿದು ಗಣೇಶನಿಗೆ ಅರ್ಪಿಸಿ ಬೆಳೆ ಹಾನಿ ತಪ್ಪಿಸುವಂತೆ ಬೇಡಿಕೊಂಡಿದ್ದಾನೆ.