ಚಿಕ್ಕಮಗಳೂರು:ಯೂತ್ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ಆಗಿರುವ ಘಟನೆ ಚಿಕ್ಕಮಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಘಟನೆ ನಡೆಯಿತು. ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಹಾಗೂ ಕಾರ್ಯದರ್ಶಿ ನಿತೀಶ್ ಗುಂಪುಗಳ ಮಧ್ಯೆ ಸಂಘರ್ಷ ಉಂಟಾಗಿದೆ. ಕಾರ್ಯದರ್ಶಿ ಹುದ್ದೆಯಿಂದ ನಿತೀಶ್‌ರನ್ನು ಸಂತೋಷ್ ತೆಗೆದು ಹಾಕಿದ್ದೇ ಗಲಾಟೆಗೆ ಕಾರಣವೆಂದು ತಿಳಿದುಬಂದಿದೆ. ಈ ಬೆಳವಣಿಗೆಯಿಂದ ಬೇಸತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ ರಾಜೀನಾಮೆಗೆ ಮುಂದಾಗಿದ್ದಾರೆ.
ಚಿಕ್ಕಮಗಳೂರು: ಪರಸ್ಪರ ಹೊಡೆದಾಡಿಕೊಂಡ ಯೂತ್ ಕಾಂಗ್ರೆಸ್ ಮುಖಂಡರು - ಯೂತ್ ಕಾಂಗ್ರೆಸ್ ಕಾರ್ಯಕರ್ತರು
ಕಾರ್ಯದರ್ಶಿ ಹುದ್ದೆಯಿಂದ ನಿತೀಶ್‌ರನ್ನು ತೆಗೆದುಹಾಕಿದ್ದರ ಕುರಿತು ಪ್ರಶ್ನೆ ಮಾಡಿದ್ದಕ್ಕೆ ಎರಡು ಗುಂಪುಗಳ ಮಧ್ಯೆ ಮಾತಿನ ಚಕಮಕಿಯೊಂದಿಗೆ ಪರಸ್ಪರ ಹೊಡೆದಾಟವೂ ನಡೆದಿದೆ.
ಪರಸ್ಪರ ಒಡೆದಾಡಿಕೊಂಡ ಯೂತ್ ಕಾಂಗ್ರೆಸ್ ಮುಖಂಡರು