ಕರ್ನಾಟಕ

karnataka

ETV Bharat / state

ಕೇದಾರನಾಥ ಯಾತ್ರೆಗೆ ಹೋಗಿದ್ದ ಚಿಕ್ಕಮಗಳೂರಿನ ಯುವಕ ಸಾವು

ಕೇದರನಾಥ ಯಾತ್ರೆಗೆ ತೆರಳಿದ್ದ ಯುವಕ ಅನಾರೋಗ್ಯದಿಂದ ಉತ್ತರಾಖಂಡದಲ್ಲಿ ಮೃತಪಟ್ಟಿದ್ದಾರೆ.

young-man-from-mudigere-who-had-gone-on-pilgrimage-to-kedarnath-died
ಕೇದಾರನಾಥ ಯಾತ್ರೆಗೆ ಹೋಗಿದ್ದ ಚಿಕ್ಕಮಗಳೂರಿನ ಯುವಕ ಸಾವು

By

Published : Aug 1, 2023, 6:54 PM IST

ಚಿಕ್ಕಮಗಳೂರು:ಕೇದರನಾಥ ಯಾತ್ರೆಗೆ ತೆರಳಿದ್ದ ಚಿಕ್ಕಮಗಳೂರು ಮೂಲದ ಯುವಕ ಅಸ್ವಸ್ಥಗೊಂಡು ಸಾವನ್ನಪ್ಪಿರುವ ಘಟನೆ ನಡೆದಿದೆ. ಗಿರೀಶ್ (25) ಕೇದರನಾಥ‌ ಯಾತ್ರೆಯಲ್ಲಿ ಸಾವನ್ನಪ್ಪಿದ ಮೃತ ಯುವಕ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಜನ್ನಾಪುರ ಗ್ರಾಮದ ನಿವಾಸಿಯಾಗಿರುವ ಗಿರೀಶ್, ಮೂಡಿಗೆರೆಯಲ್ಲಿ ಅಡುಗೆ ವೃತ್ತಿ ಮಾಡುತ್ತಿದ್ದ. ಗಿರೀಶ್ ಕಳೆದ ವಾರ ಮೂಡಿಗೆರೆಯಿಂದ ಕೇದರನಾಥ್ ಯಾತ್ರೆಗೆ ತೆರಳಿದ್ದ.

ಆದರೆ ಕೇದರನಾಥದಲ್ಲಿ ಆರೋಗ್ಯ ಸಮಸ್ಯೆಯಿಂದ ತೀವ್ರ ಅಸ್ವಸ್ಥಗೊಂಡಿದ್ದ. ಬಳಿಕ ಸ್ಥಳೀಯರ ಸಹಾಯದಿಂದ ರಿಷಿಕೇಶ್ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ. ದುರಾದೃಷ್ಟವಶಾತ್​ ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆ ಗಿರೀಶ್ ಸಾವನ್ನಪಿದ್ದಾನೆ. ಈ ಬಗ್ಗೆ ಕೇದಾರನಾಥ ಪೊಲೀಸರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಗಿರೀಶ್ ಮೃತದೇಹ ರಿಷಿಕೇಶ್ ಸರ್ಕಾರಿ ಆಸ್ಪತ್ರೆಯಲ್ಲಿದ್ದು, ಕುಟುಂಬಸ್ಥರಿಗೆ ಬರುವಂತೆ ತಿಳಿಸಿದ್ದಾರೆ. ಮಗನ ಸಾವಿನ ಸುದ್ದಿ ತಿಳಿದು ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ:31ನೇ ದಿನದ ಅಮರನಾಥ ಯಾತ್ರೆಯಲ್ಲಿ 3.97 ಲಕ್ಷ ಭಕ್ತರಿಂದ ದರ್ಶನ: 36 ಯಾತ್ರಾರ್ಥಿಗಳ ಸಾವು

ABOUT THE AUTHOR

...view details