ಕರ್ನಾಟಕ

karnataka

ETV Bharat / state

ಮರಗೆಲಸ ಮಾಡುವ ವೇಳೆ ವಿದ್ಯುತ್​ ತಗುಲಿ ಕಾರ್ಮಿಕ ಸಾವು - ಚಿಕ್ಕಮಗಳೂರು ಲೇಟೆಸ್ಟ್​ ನ್ಯೂಸ್​

ಚಿಕ್ಕಮಗಳೂರು ಜಿಲ್ಲೆಯ ಎನ್​​ಆರ್ ಪುರ ತಾಲೂಕಿನ ಬಾಳೆಹೊನ್ನೂರಿನ ಮಸಿಗದ್ದೆ ಗ್ರಾಮದಲ್ಲಿ ಕಾಫೀ ತೋಟದಲ್ಲಿ ಮರಗೆಲಸ ಮಾಡುವ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

Workers died by electric shock at Chikmagalur
ಮರಗೆಲಸ ಮಾಡುವ ವೇಳೆ ವಿದ್ಯುತ್​ ತಗುಲಿ ಕಾರ್ಮಿಕ ಸಾವು

By

Published : May 22, 2020, 6:53 PM IST

ಚಿಕ್ಕಮಗಳೂರು: ಕಾಫಿ ತೋಟದಲ್ಲಿ ಮರಗೆಲಸ ಮಾಡುವ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಎನ್​​ಆರ್ ಪುರ ತಾಲೂಕಿನ ಬಾಳೆಹೊನ್ನೂರಿನ ಮಸಿಗದ್ದೆ ಗ್ರಾಮದಲ್ಲಿ ನಡೆದಿದೆ.

ಜೇನು ಗದ್ದೆ ಸಮೀಪದ ಹ್ಯಾರಂಬಿ ಗ್ರಾಮದ ರೇವಣ್ಣ (24) ಮೃತ ಕಾರ್ಮಿಕ. ಇವರು ಕಾಫೀ ತೋಟದಲ್ಲಿ ಮರಗೆಲಸ ಮಾಡುತ್ತಿದ್ದರು. ಈ ವೇಳೆ, ಮರದ ಕೊಂಬೆಗಳು ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ರೇವಣ್ಣ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಘಟನಾ ಸ್ಥಳಕ್ಕೆ ಬಾಳೆಹೊನ್ನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details