ಕರ್ನಾಟಕ

karnataka

ETV Bharat / state

ದೇಶದ್ರೋಹಿ ಚಟುವಟಿಕೆಯನ್ನು ಮಟ್ಟ ಹಾಕುವ ಕೆಲಸ ಮಾಡಲಾಗುತ್ತಿದೆ : ಸಚಿವೆ ಶೋಭಾ ಕರಂದ್ಲಾಜೆ - etv bharat kannada

ಎನ್​ಐಎ ದೇಶದಲ್ಲಿ ಭಯೋತ್ಪಾದನೆ ಎಲ್ಲೆಲ್ಲಿ ನಡೆಯುತ್ತಿದೆ ಎಂದು ಸಮಗ್ರ ತನಿಖೆ ನಡೆಸುತ್ತಿದೆ- ದೇಶದ್ರೋಹಿ ಚಟುವಟಿಕೆಯನ್ನು ಮಟ್ಟ ಹಾಕುವ ಕೆಲಸ ಮಾಡಲಾಗುತ್ತಿದೆ - ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ

Union Minister Shobha Karandlaje
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

By

Published : Jan 11, 2023, 3:46 PM IST

Updated : Jan 11, 2023, 4:00 PM IST

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಚಿಕ್ಕಮಗಳೂರು:ಶಿವಮೊಗ್ಗದಲ್ಲಿ ಶಂಕಿತರ ಮನೆ ಮೇಲೆ ಇಡಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ, ತರೀಕೆರೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ ನೀಡಿದರು. ರಾಷ್ಟ್ರೀಯ ತನಿಖಾ ದಳ (ಎನ್​ಐಎ) ತನಿಖೆ ಮಾಡುತ್ತಿದೆ, ತನಿಖೆ ಆಧಾರದಲ್ಲಿ ಇಡಿ ದಾಳಿ ಮಾಡಿದೆ. ಇಡಿ ಒಂದು ಪ್ರಕ್ರಿಯೆ ಮಾತ್ರ, ಎನ್​ಐಎ ದೇಶದಲ್ಲಿ ಭಯೋತ್ಪಾದನೆ ಎಲ್ಲೆಲ್ಲಿ ನಡೆಯುತ್ತಿದೆ ಎಂದು ಸಮಗ್ರ ತನಿಖೆ ನಡೆಸುತ್ತಿದೆ. ದೇಶದ್ರೋಹಿ ಚಟುವಟಿಕೆಯನ್ನು ಮಟ್ಟ ಹಾಕುವ ಕೆಲಸ ಮಾಡಲಾಗುತ್ತಿದೆ ಎಂದರು.

ಕರ್ನಾಟಕ ರಾಜ್ಯದ ಹಲವಾರು ಪ್ರದೇಶದಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ದಾಳಿ ನಡೆಸಿದೆ. ಹಲವಾರು ಭಯೋತ್ಪಾದಕರು ಆಲ್ ಖೈದಾ, ಐಸಿಸ್ ಜೊತೆ ಸಂಬಂಧ ಇಟ್ಟುಕೊಂಡವರು, ಕಾಶ್ಮಿರ ಭಯೋತ್ಪದಕ ಸಂಘಟನೆಗಳ ಜೊತೆ ಸಂಪರ್ಕ ಇಟ್ಟುಕೊಂಡವರು ಸಿಕ್ಕುದ್ದಾರೆ. ಅವರ ಮನೆಯಲ್ಲಿ ಬಾಂಬ್ ತಯಾರಿಕಾ ಘಟಕಗಳು ಸಿಕ್ಕಿವೆ, ಬಾಂಬ್​ ತಯಾರಿಕೆ ಮಾಡಲು ಬಳಸುವ ಆರ್​ಡಿಎಕ್ಸ್ ಸೇರಿದಂತೆ ವೈರ್​ಗಳು ಪತ್ತೆಯಾಗಿವೆ. ಅದರ ಜೂತೆಗೆ ಹಲವಾರು ಭಿತ್ತಿ ಪತ್ರ, ಅಕೌಂಟ್ ಮಾಹಿತಿ ಸಿಕ್ಕಿದೆ ಎಂದು ಹೇಳಿದರು.

ಶಾರಿಕ್ ದೇವಸ್ಥಾನಗಳನ್ನು ಸ್ಫೋಟ ಮಾಡುವಂತಹ ಸಂಚು ರೂಪಿಸಿದ್ದ..ಈ ಆಧಾರಗಳ ಮೇಲೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ​ (ಪಿಎಫ್ಐ)ವನ್ನು ಕೇಂದ್ರ ಸರ್ಕಾರ ನಿಷೇಧ ಮಾಡಿದೆ. ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಇಟ್ಟು ಸ್ಫೋಟಕ್ಕೆ ಕಾರಣನಾದ ಶಾರೀಕ್, ರಾಜ್ಯದ ಪ್ರಮುಖ ದೇವಸ್ಥಾನಗಳನ್ನು ಸ್ಫೋಟ ಮಾಡುವಂತಹ ಸಂಚು ರೂಪಿಸಿದ್ದ. ಇದರ ಹಿಂದೆ ಬಹಳ ಸಂಘಟನೆಗಳು ಮತ್ತು ಅಂತಾರಾಷ್ಟ್ರೀಯ ಮಟ್ಟದ ಸಂಘಟನೆಗಳು ಜೋಡಣೆಯಾಗಿದೆ. ಹೀಗಾಗಿ ಇದಕ್ಕೆ ಸಮಗ್ರವಾದಂತಹ ತನಿಖೆ ನಡೆಯಬೇಕು ಎಂದರು.

ಬೆಂಗಳೂರು, ಮೈಸೂರು, ಮಂಗಳೂರು, ಭಟ್ಕಳ, ಹುಬ್ಬಳ್ಳಿ ಯಲ್ಲಿ ಬಹಳ ಸೂಕ್ಷ್ಮ ಪ್ರದೇಶಗಳು ಭಯೋತ್ಪದಕರಿಗೆ ಅಡ್ಡೆಯಾಗಿವೆ. ಇವರು ಹಣಕಾಸಿನ ಸೌಲಭ್ಯವನ್ನು ದೇಶ, ವಿದೇಶದಿಂದ ತರಿಸಿಕೊಂಡ ಮಾಹಿತಿ ಹಾಗೂ ವಿಶೇಷ ಅಕೌಂಟ್​ಗಳ ಮಾಹಿತಿ ಸಿಕ್ಕಿದೆ, ಇದಕ್ಕೆ ಎನ್​ಐಎ ತನಿಖೆ ಮಾಡುತ್ತಿದೆ ಹೀಗಾಗಿ ಇಡಿ ದಾಳಿ ನಡೆದಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಎನ್ಐಎಯಿಂದ ಇನ್ನಿಬ್ಬರು ಆರೋಪಿಗಳ ಬಂಧನ..ಶಿವಮೊಗ್ಗದ ತುಂಗಾ ನದಿ ತೀರದಲ್ಲಿ ಪ್ರಾಯೋಗಿಕವಾಗಿ ಬಾಂಬ್ ಸ್ಫೋಟಸಿದ್ದ ಪ್ರಕರಣದಲ್ಲಿ ಮತ್ತಿಬ್ಬರು ಆರೋಪಿಗಳನ್ನ ರಾಷ್ಟ್ರೀಯ ತನಿಖಾ ದಳ(ಎನ್ಐಎ) ಬಂಧಿಸಿದೆ. ದಕ್ಷಿಣ ಕನ್ನಡ ಜಿಲ್ಲೆ ತೊಕ್ಕುಟ್ಟುವಿನ ಮಜಿನ್ ಅಬ್ದುಲ್ ರೆಹಮಾನ್ ಹಾಗೂ ದಾವಣಗೆರೆ ಜಿಲ್ಲೆ ದೇವನಾಯಕನಹಳ್ಳಿಯ ನದೀಂ ಅಹಮದ್ ಬಂಧಿತ ಆರೋಪಿಗಳಾಗಿದ್ದಾರೆ. ಭಾರತದಲ್ಲಿ ಇಸ್ಲಾಮಿಕ್ ಸ್ಟೇಟ್ಸ್ ಭಯೋತ್ಪಾದಕ ಚಟುವಟಿಕೆಗಳನ್ನ ಹೆಚ್ಚಿಸಲು ಮಜಿನ್ ಅಬ್ದುಲ್ ರೆಮಾನ್ ಹಾಗೂ ನದೀಂ ಅಹಮದ್ ಅವರನ್ನು ಪ್ರಮುಖ ಆರೋಪಿಗಳಾದ ಮಾಜ್ ಮುನೀರ್ ಹಾಗೂ ಸೈಯದ್ ಯಾಸೀನ್ ನೇಮಕಗೊಳಿಸಿದ್ದರು. ಸಂಚನ್ನು ಮತ್ತಷ್ಟು ದೊಡ್ಡಮಟ್ಟದಲ್ಲಿ ವಿಸ್ತರಿಸುವ ಭಾಗವಾಗಿ ತುಂಗಾ ನದಿ ತೀರದಲ್ಲಿ ಪ್ರಾಯೋಗಿಕ ಸ್ಫೋಟ ನಡೆಸಲಾಗಿತ್ತು ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಎನ್ಐಎ ಪ್ರಕಟಣೆಯಲ್ಲಿ ತಿಳಿಸಿದೆ.

ತೀರ್ಥಹಳ್ಳಿಯಲ್ಲಿ ಶಂಕಿತ ಉಗ್ರರ ಮನೆಗಳ ಶೋಧ.. ತೀರ್ಥಹಳ್ಳಿಯ ಶಂಕಿತ ಉಗ್ರ ಶಾರಿಕ್ ಹಾಗೂ ಮಾಜ್ ಮುನೀರ್ ಮನೆಗಳ‌ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಂದು ಬೆಳಗ್ಗೆ ತೀರ್ಥಹಳ್ಳಿಯ ಮೀನು ಮಾರುಕಟ್ಟೆ ಬಳಿಯ ಸಿನಿಮಾ ಟಾಕೀಸ್ ರಸ್ತೆ ಸಮೀಪವಿರುವ ಆರೋಪಿಗಳ ಮನೆಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ಮುಂದುವರೆದಿದೆ.

ಶಾರಿಕ್ ಕುಟುಂಬಸ್ಥರಿಗೆ ಸೇರಿದ ಕಟ್ಟಡದಲ್ಲಿ ತೀರ್ಥಹಳ್ಳಿ ಬ್ಲಾಕ್ ಕಾಂಗ್ರೆಸ್ ಕಚೇರಿಯನ್ನು ತೆರೆಯಲಾಗಿದೆ. ಈ ಕಚೇರಿ ಮೇಲೆ ಸಹ ದಾಳಿ ನಡೆಸಲಾಗಿದೆ. ಅಲ್ಲದೇ, ಶಾರಿಕ್ ಸಂಬಂಧಿಕರ‌ ಮನೆ ಮೇಲೂ ಸಹ ದಾಳಿ ಮಾಡಲಾಗಿದೆ.

ಶಾರಿಕ್ ಹಿನ್ನೆಲೆ .. ಮಂಗಳೂರು ಕುಕ್ಕರ್‌ ಸ್ಫೋಟ ಪ್ರಕರಣದಲ್ಲಿ ಪ್ರಧಾನ ಆರೋಪಿಯಾಗಿರುವ ಮೊಹಮ್ಮದ್‌ ಶಾರಿಕ್, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವನು. 2019ರ ಸೆಪ್ಟೆಂಬರ್​ನಲ್ಲಿ ಕದ್ರಿ ಪೊಲೀಸ್ ಠಾಣೆ ಬಳಿಯ ಅಪಾರ್ಟ್​ಮೆಂಟ್‌ವೊಂದರಲ್ಲಿ ಉಗ್ರರ ಪರ ಗೋಡೆಬರಹ ಬರೆದ ಪ್ರಕರಣದಲ್ಲಿ ಭಾಗಿಯಾಗಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿದ್ದು, ಇದರಲ್ಲಿ ಮಾಜ್ ಮುನೀರ್, ಸಾದತ್, ಶಾರಿಕ್ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು. ಇವರೆಲ್ಲರೂ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಸೊಪ್ಪಿನ ಗುಡ್ಡೆ ನಿವಾಸಿಗಳಾಗಿದ್ದಾರೆ.

ಇದನ್ನೂ ಓದಿ:ಯೂಟ್ಯೂಬ್​ ನೋಡಿ ಸ್ಫೋಟಕ ತಯಾರಿಸಿ, ಪ್ರಯೋಗಿಸಿದ ಬಾಲಕರು: ಶಾಲಾ ವಾಹನಕ್ಕೆ ಹಾನಿ

Last Updated : Jan 11, 2023, 4:00 PM IST

ABOUT THE AUTHOR

...view details