ಚಿಕ್ಕಮಗಳೂರು: ತನ್ನ ಶೀಲ ಶಂಕಿಸಿ ಕರಪತ್ರ ಹಂಚಿದ್ದಾನೆ ಹಾಗೂ ಕೊಪ್ಪ ಬಸ್ ನಿಲ್ದಾಣದಲ್ಲಿ ತನ್ನ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ ಎಂದು ಆರೋಪಿಸಿ ಮಹಿಳೆವೋರ್ವಳು ವ್ಯಕ್ತಿಯನ್ನು ಥಳಿಸಿರುವ ಘಟನೆ ಕೊಪ್ಪ ತಾಲೂಕಿನ ಜಯಪುರದಲ್ಲಿ ನಡೆದಿದೆ.
ಶೀಲ ಶಂಕಿಸಿ ಕರಪತ್ರ ಹಂಚಿಕೆ ಆರೋಪ: ವ್ಯಕ್ತಿಗೆ ರಸ್ತೆಯಲ್ಲೇ ಧರ್ಮದೇಟು ನೀಡಿದ ಮಹಿಳೆ - chikmagalore latest crime news
ತನ್ನ ವಿರುದ್ಧ ವಿರುದ್ಧ ಕರಪತ್ರ ಹಂಚಿದ್ದಾನೆ ಎಂದು ಆರೋಪಿಸಿ ಮಹಿಳೆವೋರ್ವಳು ವ್ಯಕ್ತಿಗೆ ರಸ್ತೆಯಲ್ಲೇ ಕಪಾಳಮೋಕ್ಷ ಮಾಡಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಸುಂದರೇಶ್ ಎಂಬ ವ್ಯಕ್ತಿಗೆ ಮಹಿಳೆವೋರ್ವಳು ನಡು ರಸ್ತೆಯಲ್ಲಿಯೇ ಧರ್ಮದೇಟು ನೀಡಿದ್ದಾಳೆ. ಸುಂದರೇಶ್ ನನ್ನು ನಡುರಸ್ತೆಯಲ್ಲಿಯೇ ಅಡ್ಡಗಟ್ಟಿ ಚಪ್ಪಲಿಯಿಂದ ಹೊಡೆದು ಕ್ಲಾಸ್ ತೆಗೆದುಕೊಂಡಿದ್ದಾಳೆ. ಹಲ್ಲೆಗೊಳಗಾದ ಸುಂದರೇಶ್ ಈ ಮಹಿಳೆಯ ಪಕ್ಕದ ಮನೆಯ ನಿವಾಸಿ ಎಂದು ತಿಳಿದುಬಂದಿದೆ. ಸುಂದರೇಶ ಹಲವು ಬಾರಿ ತೊಂದರೆ ನೀಡಿರುವುದಾಗಿ ಕಳೆದ ತಿಂಗಳು ಕೂಡ ಜಯಪುರ ಪೊಲೀಸ್ ಠಾಣೆಯಲ್ಲಿ ಈ ಮಹಿಳೆ ದೂರು ನೀಡಿದ್ದರು.
ಇಂದು ಮತ್ತೆ ಸುಂದರೇಶ್ ತನಗೆ ತೊಂದರೆ ನೀಡುತ್ತಿದ್ದ ಎಂದು ಮಹಿಳೆ ಆರೋಪಿಸಿದ್ದು, ನಡು ರಸ್ತೆಯಲ್ಲಿಯೇ ಥಳಿಸಿದ್ದಾಳೆ. ಜಯಪುರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಆರೋಪಿ ಸುಂದರೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ.