ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರಿನಲ್ಲಿ ಮಹಿಳೆ ಕೊಂದು ಸುಟ್ಟು ಹಾಕಿದ ಹಂತಕ ಸೆರೆ; 7 ದಿನಗಳ ನಂತರ ಪ್ರಕರಣ ಬಯಲು

ಚಿಕ್ಕಮಗಳೂರು ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಕೂಲಿ ಮಾಡುತ್ತಿದ್ದ ಮಹಿಳೆಯನ್ನು ಹತ್ಯೆ ಮಾಡಿ ಸುಟ್ಟು ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ.

ಎಸ್ಟೇಟ್ ಕಾರ್ಮಿಕ ನಾಗರಾಜ್ ನಾಯ್ಕ್
ಎಸ್ಟೇಟ್ ಕಾರ್ಮಿಕ ನಾಗರಾಜ್ ನಾಯ್ಕ್

By

Published : Jun 20, 2023, 4:53 PM IST

Updated : Jun 20, 2023, 8:04 PM IST

ಚಿಕ್ಕಮಗಳೂರು : ಕೂಲಿ ಕಾರ್ಮಿಕ ಮಹಿಳೆಯೊಬ್ಬರನ್ನು ಭೀಕರವಾಗಿ ಹತ್ಯೆ ಮಾಡಿ ಸುಟ್ಟು ಹಾಕಿದ ಘಟನೆ ಚಿಕ್ಕಮಗಳೂರು ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿದೆ ಬಂದಿದೆ. ಕೊಲೆಯಾದ ಮಹಿಳೆಯನ್ನು ಜಯಮ್ಮ (55) ಎಂದು ಗುರುತಿಸಲಾಗಿದೆ. ಸಿದ್ದಾಪುರ ಗ್ರಾಮದಲ್ಲಿ ಹತ್ಯೆ ಮಾಡಿ ಸ್ಥಳದಿಂದ 2 ಕಿ.ಮೀ ದೂರದಲ್ಲಿರುವ ಸುಪ್ರೀಂ ಎಸ್ಟೇಟ್​​ನಲ್ಲಿ ಹಂತಕರು ಸುಟ್ಟು ಹಾಕಿದ್ದರು.

ಹತ್ಯೆ ನಡೆದು ಏಳು ದಿನಗಳ ಬಳಿಕ ಪ್ರಕರಣ ಬಯಲಾಗಿದೆ. ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಎಸ್ಟೇಟ್​ನ ಕೆಲವರನ್ನು ಕರೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ:ಯುವಕರಿಂದ ಸರ್ಕಾರಿ ಬಸ್ ತಡೆದು ಗಲಾಟೆ ಪ್ರಕರಣ.. ಧರ್ಮಸ್ಥಳ ಪೊಲೀಸರಿಂದ ಮೂವರ ಬಂಧನ

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಸ್ಟೇಟ್ ಕಾರ್ಮಿಕ ನಾಗರಾಜ್ ನಾಯ್ಕ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಹಲವು ದಿನಗಳ ಹಿಂದೆ ಕೊಲೆ ನಡೆದಿದ್ದರೂ ಮಾಲೀಕರು ಸೇರಿದಂತೆ ಯಾರಿಂದಲೂ ದೂರು ಬಂದಿರಲಿಲ್ಲ. ಹೀಗಾಗಿ ಪ್ರಕರಣ ಸಾಕಷ್ಟು ಅನುಮಾನಗಳಿಗೂ ಕಾರಣವಾಗಿದೆ.

ಇದನ್ನೂ ಓದಿ:ಹಾವೇರಿಯಲ್ಲಿ ಲಾರಿ ಚಾಲಕ​ನ ಕೊಲೆಗೈದು ಸ್ಟೀಲ್ ಕಳ್ಳತನ: ಐವರ ಬಂಧನ

ಸೋಮವಾರ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರಿಗೆ ವ್ಯಕ್ತಿಯೊಬ್ಬ ಫೋನ್ ಕರೆ ಮಾಡಿ ಘಟನೆಯ ಬಗ್ಗೆ ಸುಳಿವು ನೀಡಿದ್ದಾನೆ. ಬಳಿಕ ಎಸ್ಪಿ ಸ್ಥಳಕ್ಕೆ ಭೇಟಿ ನೀಡಿದ್ದರು. ಪ್ರಕರಣದ ತನಿಖೆಯ ನಂತರ ಸತ್ಯಾಸತ್ಯತೆ ಹೊರಬರಲಿದೆ.

ನೈಟ್ ಸೆಕ್ಯುರಿಟಿ ಗಾರ್ಡ್ ಮೇಲೆ ಮಾರಣಾಂತಿಕ ಹಲ್ಲೆ :ಬೆಂಗಳೂರಿನ ಆರ್.ಟಿ. ನಗರದ ಎಂಎಲ್ಎ ಲೇಔಟ್​ನಲ್ಲಿ ನೈಟ್ ಸೆಕ್ಯುರಿಟಿ ಗಾರ್ಡ್ ಮೇಲೆ ಪುಡಿರೌಡಿಯೊಬ್ಬ ಚಾಕುವಿನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಸೋಮವಾರ ಬೆಳಗಿನ ಜಾವ 2.30ರ ಸುಮಾರಿಗೆ ನಡೆದಿದೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನಿವಾಸದಿಂದ ಕೂಗಳತೆ ದೂರದಲ್ಲಿಯೇ ಘಟನೆ ನಡೆದಿದ್ದು, ಅಪರಿಚಿತ ಆರೋಪಿಯ ಕೃತ್ಯಕ್ಕೆ ಸೆಕ್ಯುರಿಟಿ ಗಾರ್ಡ್ ಅಲ್ಬರ್ಟ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾರೆ.

ಎಂಎಲ್ಎ ಲೇಔಟ್ 1ನೇ ಮುಖ್ಯರಸ್ತೆಯಲ್ಲಿ ಆಲ್ಬರ್ಟ್ ಎಂಬವರು ಭಾನುವಾರ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡಿಕೊಂಡಿದ್ದರು. ಬೆಳಗಿನ ಜಾವ 2:30 ರ ಸುಮಾರಿಗೆ ಬಂದಿದ್ದ ಆರೋಪಿಯು ಆಲ್ಬರ್ಟ್ ಕುಳಿತಿದ್ದ ಕುರ್ಚಿಯ ಹಿಂದೆ ಬಂದು ನಿಂತುಕೊಂಡಿದ್ದ. ಆರೋಪಿಯನ್ನು ಉದ್ದೇಶಿಸಿ ಯಾರಪ್ಪ ನೀನು? ರಾತ್ರಿ ವೇಳೆ ಇಲ್ಲೆಲ್ಲ ಓಡಾಡಬಾರದು, ಕ್ಯಾಮರಾಗಳಿವೆ ಎಂದು ಆಲ್ಬರ್ಟ್ ಹೇಳಿದ್ದರು. ಈ ಮಾತಿಗೆ ಸಿಟ್ಟಿಗೆದ್ದ ಆರೋಪಿ ಅವಾಚ್ಯವಾಗಿ ನಿಂದಿಸಿದ್ದಾನೆ. ಅಲ್ಲದೇ, ತನ್ನ ಬಳಿಯಿದ್ದ ಚಾಕುವಿನಿಂದ ಆಲ್ಬರ್ಟ್​ರ ಎಡಗೆನ್ನೆ ಕೊಯ್ದು ಸ್ಥಳದಿಂದ ಕಾಲ್ಕಿತ್ತಿದ್ದಾನೆ.

ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ :ಘಟನೆಯ ನಂತರ ಸಾರ್ವಜನಿಕರೊಬ್ಬರ ಸಹಾಯ ಪಡೆದು ಸ್ಥಳಿಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿರುವ ಆಲ್ಬರ್ಟ್ ಆರ್.ಟಿ. ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹೀಗಾಗಿ ಪ್ರಕರಣ ದಾಖಲಾಗಿದೆ. ಸೆಕ್ಯುರಿಟಿ ಗಾರ್ಡ್ ಮೇಲೆ ಆರೋಪಿ ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆರೋಪಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:Bengaluru crime: ನೈಟ್ ಸೆಕ್ಯುರಿಟಿ ಗಾರ್ಡ್ ಮೇಲೆ ಮಾರಣಾಂತಿಕ ಹಲ್ಲೆ.. ಮಾಜಿ ಸಿಎಂ ನಿವಾಸದ ಕೂದಲಳತೆ ದೂರದಲ್ಲೇ ಪುಡಿರೌಡಿಯ ಹಾವಳಿ

Last Updated : Jun 20, 2023, 8:04 PM IST

ABOUT THE AUTHOR

...view details