ಕರ್ನಾಟಕ

karnataka

ETV Bharat / state

ಹೆರಿಗೆ ವೇಳೆ ಮಹಿಳೆ ಸಾವು ಆಸ್ಪತ್ರೆ ಮುಂದೆ ಸಂಬಂಧಿಕರ ಪ್ರತಿಭಟನೆ - Woman dies while on Delivery at Chikkamagaluru

ಹೆರಿಗೆ ವೇಳೆ ಮಹಿಳೆಯೋರ್ವಳು ತೀವ್ರ ರಕ್ತ ಸ್ರಾವ ಉಂಟಾಗಿ ಸಾವನ್ನಪ್ಪಿರುವ ಘಟನೆ ಕೊಪ್ಪ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಘಟನೆ ಬಳಿಕ ಮಹಿಳೆಯ ಕುಟುಂಬಸ್ಥರು ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದ್ದು, ವೈದ್ಯರ ನಿರ್ಲಕ್ಷ್ಯವೇ ಮಹಿಳೆ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ.

Woman dies while on Delivery
ಹೆರಿಗೆ ವೇಳೆ ಮಹಿಳೆ ಸಾವು ಆಸ್ಪತ್ರೆ ಮುಂದೆ ಸಂಬಂಧಿಕರ ಪ್ರತಿಭಟನೆ

By

Published : Feb 4, 2020, 5:40 PM IST

ಚಿಕ್ಕಮಗಳೂರು:ಹೆರಿಗೆ ವೇಳೆ ಮಹಿಳೆಯೋರ್ವಳು ತೀವ್ರ ರಕ್ತ ಸ್ರಾವ ಉಂಟಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಕೊಪ್ಪ ತಾಲೂಕು ಸರ್ಕಾರಿ ಆಸ್ವತ್ರೆಯಲ್ಲಿ ಈ ಘಟನೆ ನಡೆದಿದ್ದು ಉಷಾ (24) ಮೃತಪಟ್ಟ ಮಹಿಳೆ. ಘಟನೆ ಬಳಿಕ ಮಹಿಳೆಯ ಕುಟುಂಬಸ್ಥರು ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದ್ದು, ವೈದ್ಯರ ನಿರ್ಲಕ್ಷ್ಯವೇ ಮಹಿಳೆ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ.

ಆಸ್ಪತ್ರೆ ಮುಂದೆ ಸಂಬಂಧಿಕರ ಪ್ರತಿಭಟನೆ

ಆಸ್ವತ್ರೆಯ ವೈದ್ಯ ಬಾಲಕೃಷ್ಣ ಎಂಬವರು ಶೂಶ್ರುಕಿಯರಿಗೆ ಹೆರಿಗೆ ಮಾಡಿಸುವಂತೆಹೇಳಿ ಮನೆಗೆ ಹೋದ ಪರಿಣಾಮ ಶೂಶ್ರೂಕಿಯರೇ ಹೆರಿಗೆ ಮಾಡಿಸಿದ್ದಾರೆ. ಈ ವೇಳೆ ಅಧಿಕ ರಸ್ತ ಸ್ರಾವ ಉಂಟಾಗಿದ್ದು, ಕೂಡಲೇ ಮಹಿಳೆಯನ್ನು ಶಿವಮೊಗ್ಗಕ್ಕೆ ರವಾನೆ ಮಾಡಲಾಗಿದೆ. ಆದರೆ ಮಾರ್ಗ ಮಧ್ಯೆ ಉಷಾ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಮಹಿಳೆ ಕುಟುಂಬಸ್ಥರು ವೈದ್ಯ ಬಾಲಕೃಷ್ಣ ವಿರುದ್ಧ ಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಜಿಲ್ಲಾಧಿಕಾರಿಗೆ ದೂರು ನೀಡಿರುವುದು

For All Latest Updates

ABOUT THE AUTHOR

...view details