ಚಿಕ್ಕಮಗಳೂರು: ವಿದ್ಯುತ್ ತಂತಿ ತಗುಲಿ ಕಾಡಾನೆ ಸಾವಿಗೀಡಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ರೈತನ ಜಮೀನಿನ ವಿದ್ಯುತ್ ತಂತಿ ತಗುಲಿ ಕಾಡಾನೆ ಸಾವು - Wild elephant died
ಹೊಸಪೇಟೆ ಸಮೀಪದ ಕಲ್ಲು ಹೊಳೆ ಗ್ರಾಮದಲ್ಲಿ ಜೋಳದ ಹೊಲಕ್ಕೆ ನುಗ್ಗಿದ ಕಾಡಾನೆ ವಿದ್ಯುತ್ ತಂತಿ ತುಳಿದಿದೆ. ಪರಿಣಾಮ ಸ್ಥಳದಲ್ಲೇ ಅಸುನೀಗಿದೆ. ಜಮೀನಿನ ಮಾಲೀಕ ತಲೆಮರೆಸಿಕೊಂಡಿದ್ದಾನೆ.
ರೈತನ ಜಮೀನಿನ ವಿದ್ಯುತ್ ತಂತಿ ತಗುಲಿ ಕಾಡಾನೆ ಸಾವು
ಜಿಲ್ಲೆಯ ಕಡೂರು ತಾಲೂಕಿನ ಕಲ್ಲುಹೊಳೆ ಗ್ರಾಮದಲ್ಲಿ ಸುಮಾರು 25 ವರ್ಷದ ಕಾಡಾನೆ ವಿದ್ಯುತ್ ತಂತಿ ತುಳಿದು ಸ್ಥಳದಲ್ಲಿಯೇ ಸಾವಿಗೀಡಾಗಿದೆ. ಗ್ರಾಮದ ಹೊಸಪೇಟೆ ಸಮೀಪದ ಕಲ್ಲು ಹೊಳೆ ಗ್ರಾಮದಲ್ಲಿ ಜೋಳದ ಹೊಲಕ್ಕೆ ನುಗ್ಗಿದ ಈ ಕಾಡಾನೆ ವಿದ್ಯುತ್ ತಂತಿ ತುಳಿದಿದೆ. ಪರಿಣಾಮ ಸ್ಥಳದಲ್ಲೇ ಅಸುನೀಗಿದೆ.
ಕಲ್ಲು ಹೊಳೆ ಹುಲಿಯಪ್ಪ ಎಂಬುವರ ಜಮೀನಿನಲ್ಲಿ ಈ ಘಟನೆ ನಡೆದಿದೆ. ಘಟನೆ ನಡೆದ ನಂತರ ಜಮೀನು ಮಾಲೀಕ ಹುಲಿಯಪ್ಪ ತಲೆ ಮರಿಸಿಕೊಂಡಿದ್ದಾನೆ. ಕಡೂರು ಅರಣ್ಯಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.