ಚಿಕ್ಕಮಗಳೂರು: ಕಾಡಾನೆ ತುಳಿದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮಲ್ಲೇನಹಳ್ಳಿಯಲ್ಲಿ ನಡೆದಿದೆ.
ಪ್ರೇಮನಾಥ ರಾಜು(50) ಮೃತ ಕೂಲಿ ಕಾರ್ಮಿಕ. ಈತ ಮಲ್ಲೇನಹಳ್ಳಿಯ ತೇಜಪಾಲ್ ಎಂಬುವರ ಬಿಂಡಿಗಾ ಎಸ್ಟೇಟ್ ಎಂಬ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ. ಪ್ರೇಮ್ ನಾಥ್ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಭಾರತೀಬೈಲು ಗ್ರಾಮದವರಾಗಿದ್ದು, ಹಲವು ವರ್ಷದಿಂದ ತೋಟದ ಲೈನ್ ಮನೆಯಲ್ಲಿ ಕುಟುಂಬ ಸಮೇತ ವಾಸವಾಗಿದ್ದರು.