ಚಿಕ್ಕಮಗಳೂರು:.ಐ ಟಿ ದಾಳಿ ದಿನವೂ ನಡೆಯುತ್ತಿರುತ್ತದೆ. ಇದನ್ನು ನಾವೇ ಹೇಳಿ ಮಾಡಿಸಿದ್ದು ಅಂತಾ ಹೇಗೆ ಹೇಳ್ತೀರಿ. ಹೊಗಲಿ, ನೀವು ತಪ್ಪೇ ಮಾಡಿಲ್ಲ ಎಂದರೆ ಐಟಿ ಬಗ್ಗೆ ನಿಮಗೇಕೆ ಅಷ್ಟು ಭಯ ಎಂದು ಬಿಜೆಪಿ ನಾಯಕ ಸಿಟಿ ರವಿ ಪ್ರಶ್ನಿಸಿದ್ದಾರೆ.
ಪ್ರಾಮಾಣಿಕ ವ್ಯಕ್ತಿಗಳಾಗಿದ್ದರೆ ನಿಮಗೇಕೆ ದಾಳಿಯ ಭಯ? : ಸಿ.ಟಿ.ರವಿ - ಸಂವಿಧಾನ ಬದ್ಧ
ಐ ಟಿ ದಾಳಿ ಯಾವುದೇ ಪಕ್ಷದ ಮೇಲೆ ಆಗಿಲ್ಲ. ವ್ಯಕ್ತಿಗಳ ಮೇಲೆ ಆಗಿದೆ. ಪ್ರಾಮಾಣಿಕ ವ್ಯಕ್ತಿಗಳಿಗೆ ಐಟಿ ದಾಳಿಯ ಭಯವೇಕೆ.

ಜೆಡಿಎಸ್ ನಾಯಕರ ಹೇಳಿಕೆ ಬಗ್ಗೆ ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿಟಿ ರವಿ, ದಾಳಿ ದಿನವೂ ನಡೆಯುತ್ತಿರುತ್ತದೆ, ಪ್ರಭಾವಿ ಜನರ ಮೇಲೆ ಆದಾಗ ಮಾತ್ರ ಸುದ್ದಿ ಹೋರಬರುತ್ತದೆ, ಈ ಹಿಂದೆ ನನ್ನ ಸಂಬಂಧಿ ಮೇಲೆ ಐ ಟಿ ದಾಳಿ ಆಗಿತ್ತು. ಹಾಗಂತ ಪಕ್ಷದ ಮೇಲೆ ಹಾಕುವುದು ತಪ್ಪು. ಐ ಟಿ ದಾಳಿ ಯಾವುದೇ ಪಕ್ಷದ ಮೇಲೆ ಆಗಿಲ್ಲ. ವ್ಯಕ್ತಿಗಳ ಮೇಲೆ ಆಗಿದೆ. ಪ್ರಾಮಾಣಿಕ ವ್ಯಕ್ತಿಗಳಿಗೆ ಐಟಿ ದಾಳಿಯ ಭಯವೇಕೆ ? ಎಂದು ಜೆಡಿಎಸ್ ನಾಯಕರ ಹೇಳಿಕೆಗೆ ಟಾಂಗ್ ಕೊಟ್ಟಿದ್ದಾರೆ.
ರೇವಣ್ಣ ಐಟಿ ದಾಳಿ ಬಗ್ಗೆ ಹೇಳಿಕೆಯ ಕುರಿತು ತಿರುಗೇಟು ನೀಡಿದ ರವಿ, ಅವರು ಸಂವಿಧಾನ ಬದ್ಧವಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಹಾಗೆಲ್ಲ ಮಾತನಾಡಬಾರದು, ಎಸಿಬಿ, ಪೋಲಿಸರು ರಾಜ್ಯ ಸರಕಾರದ ಅಧಿನದಲ್ಲಿ ಕಾರ್ಯನಿರ್ವಹಿಸುತ್ತಾರೆ, ಅವರಿಗೆ ದಾಳಿ ಮಾಡದೇ ರೇವಣ್ಣನವರ ಮನೆ ಕೆಲಸ ಮಾಡಿ ಅನ್ನೊಕಾಗುತ್ತಾ. ಮೊದಲು ರೇವಣ್ಣ ಕಾನೂನು ತಿಳಿದುಕೊಂಡು ಮಾತನಾಡಬೇಕು ಎಂದು ಶಾಸಕ ಸಿ ಟಿ ರವಿ ತಿರುಗೇಟು ಕೊಟ್ಟಿದ್ದಾರೆ.