ಚಿಕ್ಕಮಗಳೂರು: ವಿಶ್ವನಾಥ್ ಅವರು ಟಿಪ್ಪು ಸುಲ್ತಾನ್ ವಿಚಾರವಾಗಿ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಟಾಂಗ್ ನೀಡಿದ್ದಾರೆ.
ಟಿಪ್ಪು ಇತಿಹಾಸವನ್ನು ವಿಶ್ವನಾಥ್ ಅರ್ಧ ಮಾತ್ರ ಓದಿದ್ದಾರೆ; ಸಚಿವ ಸಿ.ಟಿ. ರವಿ
ವಿಶ್ವನಾಥ್ ಟಿಪ್ಪು ಸುಲ್ತಾನ್ ಇತಿಹಾಸವನ್ನು ಬಹುಶಃ ಅರ್ಧ ಓದಿದ್ದಾರೆ. ಅವರು ಅವನ ಎರಡು ಮುಖದ ಅಧ್ಯಯನ ಮಾಡಬೇಕು. ಅವನ ಎರಡನೇ ಮುಖದಲ್ಲಿ ಕೊಡವರ ನೋವು, ಕ್ರಿಶ್ಚಿಯನ್ನರ ಮಾರಣಹೋಮದ ಕಥೆ ತಿಳಿಯುತ್ತದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಹೇಳಿದ್ದಾರೆ.
ವಿಶ್ವನಾಥ್ ಟಿಪ್ಪು ಸುಲ್ತಾನ್ ಇತಿಹಾಸವನ್ನು ಬಹುಶಃ ಅರ್ಧ ಓದಿದ್ದಾರೆ. 1781 ರಿಂದ 1793 ರವರೆಗೆ ಟಿಪ್ಪು ಸುಲ್ತಾನ್ ತುಂಬಾ ಕ್ರೂರಿಯಾಗಿದ್ದನು. 1793 ರಿಂದ 1799 ರವರೆಗೆ ಉದಾರಿಯಾಗಿದ್ದನು. ವಿಶ್ವನಾಥ್ ಅವರು ಅವನ ಎರಡು ಮುಖದ ಅಧ್ಯಯನ ಮಾಡಬೇಕು. ಅವನ ಎರಡನೇ ಮುಖದಲ್ಲಿ ಕೊಡವರ ನೋವು, ಕ್ರಿಶ್ಚಿಯನ್ನರ ಮಾರಣಹೋಮದ ಕಥೆ ತಿಳಿಯುತ್ತದೆ ಎಂದರು.
ವಿಶ್ವನಾಥ್ ಅವರು ಮಕ್ಕಳು ಟಿಪ್ಪುವಿನ ಇತಿಹಾಸ ಓದಬೇಕು ಎಂದು ಹೇಳಿದ್ದಾರೆ. ಮಕ್ಕಳು ಖಂಡಿತವಾಗಿಯೂ ಟಿಪ್ಪು ಸುಲ್ತಾನನ ಇತಿಹಾಸ ಓದಲೇಬೇಕು. ಪರ್ಷಿಯನ್ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಹೇರಿದ್ದು ಯಾರು ಅಂತ ತಿಳಿಯುತ್ತದೆ. ಆಗ ಕನ್ನಡ ಪ್ರೇಮಿ ಟಿಪ್ಪು ಅಂತ ಘೋಷಣೆ ಕೂಗುವವರ ಬಾಯಿ ಮುಚ್ಚುತ್ತದೆ ಎಂದು ಚಿಕ್ಕಮಗಳೂರಿನಲ್ಲಿ ಸಚಿವ ಸಿ.ಟಿ. ರವಿ ಹೇಳಿದ್ದಾರೆ.