ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಶ್ರೀ ಅವಧೂತ ವಿನಯ್ ಗುರೂಜಿ ಅವರು ಇಂದು ಸಾರ್ವಜನಿಕರಿಗೆ ವಿವಿಧ ಔಷಧಿ ಗಿಡಗಳನ್ನು ವಿತರಣೆ ಮಾಡಿದರು.
ಚಿಕ್ಕಮಗಳೂರು: ಔಷಧಿ ಗಿಡಗಳನ್ನು ವಿತರಿಸಿದ ಅವಧೂತ ವಿನಯ್ ಗುರೂಜಿ - Shri Avadhuta Vinay Guruji news
ಪ್ರತಿಯೊಬ್ಬರು ಮನೆಯಲ್ಲಿ ಗಾಯಿತ್ರಿ ಮಂತ್ರ ಹಾಗೂ ಅಗ್ನಿಹೋತ್ರ ಮಾಡಬೇಕು. ಜೊತೆಗೆ ಗೋವುಗಳ ರಕ್ಷಣೆ, ಸಾಗಾಣಿಕೆಗೆ ಹೆಚ್ಚು ಒತ್ತು ಕೊಡಿ ಎಂದು ಭಕ್ತರಿಗೆ ಅವಧೂತ ವಿನಯ್ ಗುರೂಜಿ ಸಲಹೆ ನೀಡಿದರು.
![ಚಿಕ್ಕಮಗಳೂರು: ಔಷಧಿ ಗಿಡಗಳನ್ನು ವಿತರಿಸಿದ ಅವಧೂತ ವಿನಯ್ ಗುರೂಜಿ Vinay gurugi](https://etvbharatimages.akamaized.net/etvbharat/prod-images/768-512-01:11:06:1599982866-kn-ckm-03-vinay-guruji-av-7202347-13092020124345-1309f-1599981225-848.jpg)
Vinay gurugi
ಮೂಡಿಗೆರೆ ತಾಲೂಕಿನ ಬ್ರಾಹ್ಮಣರ ಸಮುದಾಯ ಭವನದಲ್ಲಿ ಶಂಕರ ಭಟ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿನಯ್ ಗುರೂಜಿ, ಪ್ರತಿಯೊಬ್ಬರು ಮನೆಯಲ್ಲಿ ಗಾಯತ್ರಿ ಮಂತ್ರ ಹಾಗೂ ಅಗ್ನಿಹೋತ್ರ ಮಾಡಬೇಕು. ಜೊತೆಗೆ ಗೋವುಗಳ ರಕ್ಷಣೆ, ಸಾಗಾಣಿಕೆಗೆ ಹೆಚ್ಚು ಒತ್ತು ಕೊಡಿ ಎಂದು ಭಕ್ತರಿಗೆ ಸಲಹೆ ನೀಡಿದರು.
ಈ ವೇಳೆ ಕಾರ್ಯಕ್ರಮದ ಆಯೋಜಕರು ಅವಧೂತ ವಿನಯ್ ಗೂರುಜಿ ಅವರಿಗೆ ನೂಲಿನ ಹಾರ ಹಾಕಿ, ಪಾದ ಪೂಜೆ ಮಾಡಿದರು.