ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ತಾಲೂಕಿನ ಹರೇಬಿಳಲು ಗ್ರಾಮದಲ್ಲಿ ಸ್ಥಳೀಯರೇ ತಮ್ಮ ಗ್ರಾಮಕ್ಕೆ ಕಾಲುಸಂಕವನ್ನು ನಿರ್ಮಿಸಿಕೊಂಡಿದ್ದಾರೆ. ಈ ಮೂಲಕ ಅವರು ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ. ಇವರು ಸೇತುವೆಗಾಗಿ ಹತ್ತಾರು ವರ್ಷಗಳಿಂದ ಮನವಿ ಮಾಡಿದ್ರು. ಆದ್ರೆ ಯಾವ ಅಧಿಕಾರಿಯೂ ಇವರ ಮನವಿಗೆ ಸ್ಪಂದಿಸಿರಲಿಲ್ಲವಂತೆ.
ವ್ಯರ್ಥವಾದ ಮನವಿ.. ಸೇತುವೆ ನಿರ್ಮಿಸಿಕೊಡುವಂತೆ ಸರ್ಕಾರ, ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಎಷ್ಟೇ ಮನವಿ ಮಾಡಿದರೂ, ಉಪಯೋಗವಾಗಲಿಲ್ಲ. ಹಾಗಾಗಿ ಹಳ್ಳಿಗರೇ ಕಾಲುಸಂಕ ನಿರ್ಮಿಸಿಕೊಂಡು ಸರ್ಕಾರಕ್ಕೆ ತಮ್ಮ ತೋಳ್ಬಲ ಪ್ರದರ್ಶಿಸಿದ್ದಾರೆ. ಸರ್ಕಾರ ಬೇಜವಾಬ್ದಾರಿಗೆ ಹಳ್ಳಿಗರು ತಾವೇ ಮರದ ಕಂಬಗಳನ್ನು ತಂದು ನದಿಗೆ ಅಡ್ಡ ಹಾಕಿ, ಹಗ್ಗ ಕಟ್ಟಿ, ಮೊಳೆ ಹೊಡೆದು, ತಿಂಗಳಿನಿಂದ ಹತ್ತಾರು ಜನ ಶ್ರಮಪಟ್ಟು ಪುಟ್ಟದೊಂದು ಕಾಲು ಸಂಕವನ್ನು ನಿರ್ಮಿಸಿಕೊಂಡಿದ್ದಾರೆ.