ಚಿಕ್ಕಮಗಳೂರು:ಕ್ಯಾಬ್ ಚಾಲಕನೊಬ್ಬ ವಿದ್ಯಾರ್ಥಿನಿ ಮತ್ತು ಶಿಕ್ಷಕಿಯರ ಜೊತೆ ಅಸಭ್ಯವಾಗಿ ವರ್ತಿಸಿದ ಹಿನ್ನೆಲೆ ಗ್ರಾಮಸ್ಥರು ಥಳಿಸಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಸಿದ್ದರಹಳ್ಳಿಯಲ್ಲಿ ನಡೆದಿದೆ.
ಶಿಕ್ಷಕಿಯರನ್ನು ಶಾಲೆಗೆ ಬಿಡುವ ಮತ್ತು ಕರೆದುಕೊಂಡು ಬರುವ ಕೆಲಸವನ್ನು ಕ್ಯಾಬ್ ಚಾಲಕ ಮಾಡುತ್ತಿದ್ದ. ಅಲ್ಲದೇ ಶಿಕ್ಷಕಿಯರನ್ನು ಶಾಲೆಗ ಬಿಟ್ಟ ನಂತರ ಅದೇ ಶಾಲೆಯ ಬಳಿಯೇ ಠಿಕಾಣಿ ಹೂಡುತ್ತಿದ್ದ ಎನ್ನಲಾಗ್ತಿದೆ.
ಚಾಲಕನು ಶಿಕ್ಷಕಿಯರು ಮತ್ತು ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ವಿಷಯವನ್ನು ವಿದ್ಯಾರ್ಥಿನಿಯರು ಗ್ರಾಮದ ಹಿರಿಯರಿಗೆ ತಿಳಿಸಿದ್ದಾರೆ. ಇದರಿಂದ ಕೋಪಗೊಂಡ ಜನರು ಚಾಲಕನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ.
ಬಳಿಕ ಚಾಲಕನ ವಿರುದ್ಧ ಸುಖರಾಯಪಟ್ಟಣದಲ್ಲಿ ಪೋಕ್ಸೋ ಕೇಸ್ ದಾಖಲು ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ:ಅತ್ಯಾಚಾರ ಯತ್ನ: ದೊಡ್ಡಬಳ್ಳಾಪುರದಲ್ಲಿ ವಿರೋಧ ವ್ಯಕ್ತಪಡಿಸಿದ ಮಹಿಳೆ ಮೇಲೆ ಪೈಶಾಚಿಕ ಕೃತ್ಯ