ಕರ್ನಾಟಕ

karnataka

ETV Bharat / state

ರಸ್ತೆ ಸರಿಪಡಿಸುವಂತೆ ಆಗ್ರಹಿಸಿ, ಮೂಡಿಗೆರೆ ಶಾಸಕರ ಮನೆ ಮುಂದೆ ಅಹೋರಾತ್ರಿ ಧರಣಿ - ಈಟಿವಿ ಭಾರತ ಕನ್ನಡ

ರಸ್ತೆ ದುರಸ್ತಿಗೊಳಿಸುವಂತೆ ಆಗ್ರಹಿಸಿ ಗ್ರಾಮಸ್ಥರೆಲ್ಲ ಸೇರಿ ಶಾಸಕರ ಮನೆ ಮುಂದೆ ಅಹೋರಾತ್ರಿ ಧರಣಿ ನಡೆಸಿದ್ದಾರೆ.

Kn_ckm_
ಶಾಸಕರ ಮನೆ ಮುಂದೆ ಪ್ರತಿಭಟನೆ

By

Published : Oct 21, 2022, 6:42 AM IST

Updated : Oct 21, 2022, 1:10 PM IST

ಚಿಕ್ಕಮಗಳೂರು: ರಸ್ತೆ ದುರಸ್ತಿ ಗೊಳಿಸುವಂತೆ ಆಗ್ರಹಿಸಿ ಜಿಲ್ಲೆಯ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಅವರ ಮನೆ ಮುಂಭಾಗದಲ್ಲಿ ಜನರು ಅಹೋರಾತ್ರಿ ಪ್ರತಿಭಟನೆ ನಡೆಸಿದ್ದಾರೆ.

ಮೂಡಿಗೆರೆ ತಾಲೂಕಿನ ಕೆಲ್ಲೂರು ಬಳಿ ಇರುವ ಶಾಸಕರ ನಿವಾಸದ ಮುಂಭಾಗದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಮುಡಿಗೆರೆ ತಾಲೂಕಿನ ಹಳುವಳ್ಳಿ, ಅರಳಿಮರ, ಗಂಜಲಗೋಡು, ಮತ್ತಿಕೆರೆ ಗ್ರಾಮಸ್ಥರು ರಸ್ತೆ ಅಭಿವೃದ್ಧಿ ಪಡಿಸುವಂತೆ ಆಗ್ರಹಿಸಿ ಸುಮಾರು 50 ಕ್ಕೂ ಹೆಚ್ಚು ಜನರು ಶಾಸಕರ ಮನೆ ಮುಂದೆ ಧರಣಿ ನಡೆಸಿದ್ದಾರೆ.

ಮೂಡಿಗೆರೆ ಶಾಸಕರ ಮನೆ ಮುಂದೆ ಅಹೋರಾತ್ರಿ ಧರಣಿ

ಇಂದು ಬೆಳಗ್ಗೆಯು ಧರಣಿ ಮುಂದುವರೆದಿದ್ದು, ಬೇಡಿಕೆ ಈಡೇರಿಕೆವರೆಗೂ ಪ್ರತಿಭಟನೆ ಮುಂದೆವರೆಸುವುದಾಗಿ ಪ್ರತಿಭಟನಾಕಾರರು ತಿಳಿಸಿದ್ದಾರೆ. ಇನ್ನು ಪ್ರತಿಭಟನಾಕಾರರನ್ನು ಮನವೋಲಿಸಲು ಪೊಲೀಸರು ಪ್ರಯತ್ನಿಸಿದರೂ ಪಟ್ಟು ಬಿಡದೇ ಸಮಸ್ಯೆ ಪರಿಹಾರ ಆಗೋವರೆಗೂ ಜಾಗ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಕಾಶ್ಮೀರದಲ್ಲಿ ನಾಗರಿಕರ ಹತ್ಯೆ ಖಂಡಿಸಿ ಪಂಡಿತರು, ಮುಸ್ಲಿಮರಿಂದ ಪ್ರತಿಭಟನೆ

Last Updated : Oct 21, 2022, 1:10 PM IST

ABOUT THE AUTHOR

...view details