ಕರ್ನಾಟಕ

karnataka

ETV Bharat / state

ಕಾಫಿನಾಡು ಬಲ್ಲಾಳರಾಯನ ದುರ್ಗಕ್ಕೆ ದುರ್ಗದಹಳ್ಳಿ ಗ್ರಾಮಸ್ಥರಿಂದ ತಡೆ - ಬಲ್ಲಾಳರಾಯನದುರ್ಗಕ್ಕೆ ದುರ್ಗದಹಳ್ಳಿ ಗ್ರಾಮಸ್ಥರು ತಡೆ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿಗೆ ಬರುವ ಪ್ರವಾಸಿಗರಿಂದ ದುಬಾರಿ ಹಣವನ್ನು ಸಿಬ್ಬಂದಿ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಬಲ್ಲಾಳರಾಯನ ದುರ್ಗ
ಬಲ್ಲಾಳರಾಯನ ದುರ್ಗ

By

Published : Oct 2, 2022, 6:34 PM IST

ಚಿಕ್ಕಮಗಳೂರು:ಕಾಫಿನಾಡಿನ ಪ್ರಸಿದ್ಧ ಪ್ರವಾಸಿ ತಾಣ ಬಲ್ಲಾಳರಾಯನದುರ್ಗಕ್ಕೆ ದುರ್ಗದಹಳ್ಳಿ ಗ್ರಾಮಸ್ಥರು ತಡೆ ಹಾಕಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿ ಬಳಿ ಘಟನೆ ನಡೆದಿದ್ದು, ಪ್ರವಾಸಿಗರಿಂದ ದುಬಾರಿ ಹಣವನ್ನು ಸಿಬ್ಬಂದಿ ವಸೂಲಿ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ: ಪ್ರಸಿದ್ಧ ತಾಣವನ್ನು ವೀಕ್ಷಿಸಲು ಬರುತ್ತಿರುವ ಪ್ರವಾಸಿಗರಿಂದ ಅರಣ್ಯ ಇಲಾಖೆ ಸಿಬ್ಬಂದಿ ತಲಾ 305 ರೂಪಾಯಿ ವಸೂಲಿ ಮಾಡುತ್ತಿದ್ದು, ಕಳೆದ 3 ವರ್ಷಗಳಲ್ಲಿ ಒಂದೂವರೆ ಕೋಟಿಗೂ ಅಧಿಕ ಹಣ ಸಂಗ್ರಹಿಸಿರುವ ಆರೋಪ ಕೇಳಿ ಬಂದಿದೆ. ಆದರೆ, ಪ್ರವಾಸಿಗರಿಗೆ ಕನಿಷ್ಠ ಶೌಚಾಲಯ, ವಿಶ್ರಾಂತಿ ಕೋಣೆಯನ್ನೂ ಕಲ್ಪಿಸಿಲ್ಲ. ಇದರಿಂದ ಪ್ರವಾಸಿ ಸ್ಥಳ ಗಲೀಜಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಅರಣ್ಯ ಹಾಗೂ ಪ್ರವಾಸೋದ್ಯಮ ಇಲಾಖೆ ವಿರುದ್ಧ ಸ್ಥಳೀಯರಿಂದ ಆಕ್ರೋಶ

ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸ್ಥಳೀಯರು: ಅರಣ್ಯ ಇಲಾಖೆ ಅಧಿಕಾರಿಗಳು ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾರೆ ಎಂಬ ಗಂಭೀರ ಆರೋಪವನ್ನು ಗ್ರಾಮಸ್ಥರು ಮಾಡುತ್ತಿದ್ದು, ಪ್ರವಾಸಿಗರಿಗೆ ರಶೀದಿ ನೀಡದೇ ಹಣ ಲಪಟಾಯಿಸಿರುವ ಆರೋಪವೂ ಕೇಳಿ ಬಂದಿದೆ. ಹೀಗಾಗಿ, ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ರತಿನಿತ್ಯ ಬಲ್ಲಾಳರಾಯನ ದುರ್ಗವನ್ನು ನೋಡಲು ಈ ಭಾಗಕ್ಕೆ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಇಲ್ಲಿ ಮೂಲಸೌಕರ್ಯದ ಕೊರತೆಯಿಂದ ಜನ ಪರಿಸರವನ್ನು ಹಾಳು ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಓದಿ:ಬಂಡೆಗೆ ಭೀಮ ದಾರ ಕಟ್ಟಿ ಬುಗುರಿ ಆಡಿದ್ದನಂತೆ.. ಈ 'ಬುಗುರಿ'ಯನ್ನೊಮ್ಮೆ ಆಡಿ, ಆಗದಿದ್ದರೆ ನೋಡಿಯಾದ್ರೂ ಬನ್ನಿ!

ABOUT THE AUTHOR

...view details