ಉಪಸಭಾಪತಿ ಎಸ್ ಎಲ್ ಧರ್ಮೇಗೌಡ ಆತ್ಮಹತ್ಯೆ, ಕಾರಣ ನಿಗೂಢ - ಎಂಎಲ್ಸಿ ಎಸ್ ಎಲ್ ಧರ್ಮೇಗೌಡ ಆತ್ಮಹತ್ಯೆ

06:24 December 29
ಎಸ್ ಎಲ್ ಧರ್ಮೇಗೌಡ ಅವರು ಸೋಮವಾರ ಸಂಜೆ ಮನೆಯಿಂದ ತಮ್ಮ ಕಾರ್‌ನಲ್ಲಿ ಒಬ್ಬರೇ ತೆರಳಿದ್ದರು. ರಾತ್ರಿಯಾದರೂ ಮನೆಗೆ ವಾಪಸ್ ಬಾರದ ಕಾರಣ ಗನ್‌ಮ್ಯಾನ್, ಪೊಲೀಸರು ಮತ್ತು ಸ್ಥಳೀಯರು ಹುಡುಕಾಟ ನಡೆಸಿದ್ದರು..
ಚಿಕ್ಕಮಗಳೂರು :ವಿಧಾನಪರಿಷತ್ ಉಪಸಭಾಪತಿ ಎಸ್‌ಎಲ್ ಧರ್ಮೇಗೌಡ(65) ಅವರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಗುಣಸಾಗರ ಬಳಿ ಸೋಮವಾರ ರಾತ್ರಿ ನಡೆದಿದೆ.
ಎಸ್ ಎಲ್ ಧರ್ಮೇಗೌಡ ಅವರು ಸೋಮವಾರ ಸಂಜೆ ಮನೆಯಿಂದ ತಮ್ಮ ಕಾರ್‌ನಲ್ಲಿ ಒಬ್ಬರೇ ತೆರಳಿದ್ದರು. ರಾತ್ರಿಯಾದರೂ ಮನೆಗೆ ವಾಪಸ್ ಬಾರದ ಕಾರಣ ಗನ್‌ಮ್ಯಾನ್, ಪೊಲೀಸರು ಮತ್ತು ಸ್ಥಳೀಯರು ಹುಡುಕಾಟ ನಡೆಸಿದ್ದರು. ಮಂಗಳವಾರ ಬೆಳಗಿನ ಜಾವ ಗುಣಸಾಗರದ ರೈಲ್ವೆ ಹಳಿ ಬಳಿ ಅವರ ಮೃತದೇಹ ಪತ್ತೆಯಾಗಿದೆ.
ತಮ್ಮ ಹಳೇ ಸ್ಯಾಂಟ್ರೋ ಕಾರಿನಲ್ಲಿ ಒಬ್ಬರೇ ತೆರಳಿದ್ದ ಧರ್ಮೇಗೌಡ ಅವರು, ರಾತ್ರಿ ಸುಮಾರು 7 ಗಂಟೆ ಅವಧಿಯಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅವರ ತಲೆ ದೇಹದಿಂದ ಛಿದ್ರಗೊಂಡಿದೆ. ದೇಹ ಸಿಕ್ಕ ಸ್ವಲ್ಪ ದೂರದಲ್ಲಿ ಅವರ ತಲೆ ಪತ್ತೆಯಾಗಿದ್ದು, ಸದ್ಯ ಸ್ಥಳಕ್ಕೆ ಎಸ್ಪಿ ಅಕ್ಷಯ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.