ಚಿಕ್ಕಮಗಳೂರು:ಇಲ್ಲಿನ ದತ್ತಾಪೀಠ ಹಾಗೂ ಮುಳ್ಳಯ್ಯನ ಗಿರಿಯಲ್ಲಿ ಗುಡ್ಡ ಕುಸಿತ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಆಗಸ್ಟ್ 30 ರ ವರೆಗೂ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಗುಡ್ಡ ಕುಸಿತ: ದತ್ತಾಪೀಠಕ್ಕೆ ಆ.30ರ ವರೆಗೆ ವಾಹನ ಸಂಚಾರ ಬಂದ್ - Vehicle traffic ban
ಅಲ್ಲಿನ ಪರಿಸ್ಥಿತಿ ಇನ್ನು ಸುಧಾರಣೆಯಾಗದ ಕಾರಣ ಆಗಸ್ಟ್ 30 ರ ವರೆಗೂ ವಾಹನಗಳ ಸಂಚಾರವನ್ನು ಈ ಭಾಗದಲ್ಲಿ ಸಂಪೂರ್ಣವಾಗಿ ಡಾ. ಬಗಾದಿ ಗೌತಮ್ ನಿಷೇಧಿಸಿದ್ದಾರೆ. ಅಲ್ಲಲ್ಲಿ ದೊಡ್ಡ ಗಾತ್ರದಲ್ಲಿ ಗುಡ್ಡ ಕುಸಿತ ಆಗುತ್ತಿರುವ ಹಿನ್ನೆಲೆ ಈ ಆದೇಶವನ್ನು ಜಾರಿ ಮಾಡಲಾಗಿದೆ.
ಆದರೇ ಅಲ್ಲಿನ ಪರಿಸ್ಥಿತಿ ಇನ್ನು ಸುಧಾರಣೆಯಾಗದ ಕಾರಣ ಆಗಸ್ಟ್ 30 ರ ವರೆಗೂ ವಾಹನಗಳ ಸಂಚಾರವನ್ನು ಈ ಭಾಗದಲ್ಲಿ ಸಂಪೂರ್ಣವಾಗಿ ನಿಷೇಧಿಸಿ ಡಾ. ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ. ಅಲ್ಲಲ್ಲಿ ದೊಡ್ಡ ಗಾತ್ರದಲ್ಲಿ ಗುಡ್ಡ ಕುಸಿತ ಆಗುತ್ತಿರುವ ಹಿನ್ನೆಲೆ ಈ ಆದೇಶವನ್ನು ಜಾರಿ ಮಾಡಲಾಗಿದೆ.
ಅತಿ ಸೂಕ್ಷ್ಮ ಮತ್ತು ತುಂಬಾ ಎತ್ತರದ ಪ್ರದೇಶವಾದ ಕಾರಣ ಗುಡ್ಡ ಕುಸಿತದಿಂದ ದೊಡ್ಡ ದೊಡ್ಡ ತೊಂದರೆಗಳಿಗೆ ಸಿಲುಕಬಹುದು ಎಂಬ ದೃಷ್ಟಿಯಿಂದ ಮುಳ್ಳಯ್ಯನ ಗಿರಿ, ದತ್ತಾಪೀಠ, ಹೊನ್ನಮ್ಮನ ಹಳ್ಳ, ಕವಿಕಲ್ ಗಂಡಿ, ಮಾಣಿಕ್ಯಧಾರ ರಸ್ತೆಯ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ. ವಾಹನ ಸಂಚಾರ ಆಗುವಂತಹ ವೇಳೆ ಯಾವುದೇ ರೀತಿಯ ಅವಘಡಗಳು ನಡೆಯಬಾರದು ಎಂದು ಮುನ್ನೆಚ್ಚರಿಕೆಯಿಂದ ಈ ನಿಷೇಧ ಹೇರಲಾಗಿದೆ.