ಕರ್ನಾಟಕ

karnataka

ETV Bharat / state

ಜಿಲ್ಲಾ ಉತ್ಸವದ ಅಂಗವಾಗಿ ವಿವಿಧ ಸ್ಪರ್ಧೆ: ರಾಕ್​ ಕ್ಲೈಂಬಿಂಗ್​ ಮಾಡಿದ ಚಿಕ್ಕಮಗಳೂರು ಡಿಸಿ! - Various sports competitions in Chikmagalur as part of the district festival

ಫೆ. 28ರಿಂದ ಮಾರ್ಚ್​ 1ರವರೆಗೆ ನಡೆಯುವ ಚಿಕ್ಕಮಗಳೂರು ಜಿಲ್ಲಾ ಉತ್ಸವದ ಅಂಗವಾಗಿ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಜಿಲ್ಲಾ ಆಟದ ಮೈದಾನದಲ್ಲಿ ಹಮ್ಮಿಕೊಂಡಿರುವ ಆಟೋಟ ಸ್ಪರ್ಧೆ ವೀಕ್ಷಿಸಲು ಇಂದು ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಿದ್ದರು.

Various sports competitions in Chikmagalur
ಚಿಕ್ಕಮಗಳೂರಿನಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳು

By

Published : Feb 27, 2020, 4:38 PM IST

ಚಿಕ್ಕಮಗಳೂರು: ಜಿಲ್ಲಾಡಳಿತದ ವತಿಯಿಂದ ಇದೇ ತಿಂಗಳು 28ರಿಂದ ಮಾರ್ಚ್​ 1ರವರೆಗೆ ನಡೆಯುವ ಜಿಲ್ಲಾ ಉತ್ಸವದ ಅಂಗವಾಗಿ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಇಂದು ಜಿಲ್ಲಾ ಆಟದ ಮೈದಾನದಲ್ಲಿ ಸಾರ್ವಜನಿಕರಿಗಾಗಿ ರಾಕ್ ಕ್ಲೈಂಬಿಂಗ್ ಸ್ಪರ್ಧೆ ಆಯೋಜಿಸಲಾಗಿತ್ತು. ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಸ್ಪರ್ಧೆಗಳನ್ನು ವೀಕ್ಷಿಸಲು ಸ್ಥಳಕ್ಕೆ ಆಗಮಿಸಿದ್ದರು.

ಜಿಲ್ಲಾಧಿಕಾರಿಯಿಂದ ರಾಕ್​ ಕ್ಲೈಂಬಿಂಗ್​

ಈ ವೇಳೆ ಸ್ವತಃ ಜಿಲ್ಲಾಧಿಕಾರಿಗಳೇ ರಾಕ್ ಕ್ಲೈಂಬಿಂಗ್ ಮಾಡುವ ಮೂಲಕ ಸಾಹಸ ಮಾಡಿದ್ರು. ಶರವೇಗದಲ್ಲಿ ಜಿಲ್ಲಾಧಿಕಾರಿಗಳು ರಾಕ್ ಕ್ಲೈಂಬಿಂಗ್ ಮಾಡುತ್ತಿದ್ದರೆ ನೆರೆದಿದ್ದವರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.

ABOUT THE AUTHOR

...view details