ಚಿಕ್ಕಮಗಳೂರು: ಅಪರಿಚಿತ ಮಹಿಳೆಯೊಬ್ಬರ ಶವ ಚಿಕ್ಕಮಗಳೂರಿನ ಅಯ್ಯನ ಕೆರೆ ಬಳಿ ಪತ್ತೆಯಾಗಿದೆ.
ಅಯ್ಯನ ಕೆರೆ ಬಳಿ ಅಪರಿಚಿತ ಮಹಿಳೆಯ ಶವ ಪತ್ತೆ - chikkamagaluru Ayyana lake
ಸಖರಾಯಪಟ್ಟಣದ ಬಳಿ ಇರುವ ಅಯ್ಯನ ಕೆರೆಯಲ್ಲಿ ಸುಮಾರು 55-60 ವಯಸ್ಸಿನ ಮಹಿಳೆಯೊಬ್ಬರ ಶವ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
![ಅಯ್ಯನ ಕೆರೆ ಬಳಿ ಅಪರಿಚಿತ ಮಹಿಳೆಯ ಶವ ಪತ್ತೆ ಅಪರಿಚಿತ ಮಹಿಳೆ ಶವ ಪತ್ತೆ](https://etvbharatimages.akamaized.net/etvbharat/prod-images/768-512-10610279-thumbnail-3x2-lek.jpg)
ಅಪರಿಚಿತ ಮಹಿಳೆ ಶವ ಪತ್ತೆ
ಸಖರಾಯಪಟ್ಟಣದ ಬಳಿ ಇರುವ ಅಯ್ಯನ ಕೆರೆಯಲ್ಲಿ ಸುಮಾರು 55-60 ವಯಸ್ಸಿನ ಮಹಿಳೆಯೊಬ್ಬರ ಶವ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಕಡೂರಿನಿಂದ ಸಖರಾಯಪಟ್ಟಣಕ್ಕೆ ಕೆಎಸ್ಆರ್ಟಿಸಿ ಬಸ್ನಲ್ಲಿ ಈ ಮಹಿಳೆ ಆಗಮಿಸಿದ್ದಾಳೆ ಎನ್ನಲಾಗಿದ್ದು, ಶವದ ಪಕ್ಕದಲ್ಲಿ ಪರ್ಸ್ ಪತ್ತೆಯಾಗಿದೆ.
ಇನ್ನು ಸಖರಾಯಪಟ್ಟಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಕೆರೆಯಲ್ಲಿದ್ದ ಶವವನ್ನು ಹೊರ ತೆಗೆದಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.