ಚಿಕ್ಕಮಗಳೂರು :ಜಿಲ್ಲೆಯಲ್ಲಿ ಕಳೆದ ಹದಿನೈದು ದಿನಗಳಿಂದ ಎಡೆಬಿಡದೆ ಮಳೆಯಾದ ಪರಿಣಾಮ ಹಲವು ಅನಾಹುತಗಳಾಗಿವೆ. ಗುಡ್ಡ ಕುಸಿತ, ಮನೆ ಹಾನಿ, ಬೆಳೆ ಹಾನಿ, ಪ್ರಾಣಹಾನಿ ಹೀಗೆ ನಾನಾ ಅವಾಂತರಗಳು ಸಂಭವಿಸಿವೆ. ಹಾನಿಯಾದ ಪ್ರದೇಶಗಳಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.
ಹಾನಿಯಾದ ಪ್ರದೇಶಗಳ ಭೇಟಿಗೂ ಮುನ್ನ ಶೃಂಗೇರಿ ಶಾರದ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮಳೆಯಿಂದ ಹಾನಿಯಾದ ಮೆಣಸೆ ಸಮೀಪದ ಕಿಕ್ರೆಯಲ್ಲಿ ಗ್ರಾಮದ ಸೇತುವೆ ಪರಿಶೀಲಿಸಿ ಮಾಹಿತಿ ಪಡೆದರು. ನಂತರ ಕೊಪ್ಪ ತಾಲೂಕಿನ ಜಯಪುರ ಸಮೀಪದ ಅಲಿಗೇಶ್ವರ ಗ್ರಾಮದಲ್ಲಿ ಮನೆಗಳ ಮೇಲೆ ಗುಡ್ಡ ಕುಸಿದಿದ್ದು, ಅದನ್ನು ವೀಕ್ಷಿಸಿದರು.