ಕರ್ನಾಟಕ

karnataka

ETV Bharat / state

ಮನೆ ಅಂಗಳಕ್ಕೆ ಬಂದ್ವು ಕಾಡು ಕೋಣಗಳು... ನಾಯಿ ಬೊಗಳಿದರೂ ಡೋಂಟ್​ ಕೇರ್​ - ಚಿಕ್ಕಮಗಳೂರು

ನಾಯಿ ಬೊಗಳಿದರೂ ಯಾವುದಕ್ಕೂ ನಾನು ಜಗ್ಗೊಲ್ಲ ಎಂಬಂತೆ ಎರಡು ಕಾಡು ಕೋಣಗಳು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಎಮ್ಮೆಗೊಂಡ ಗ್ರಾಮದಲ್ಲಿ ಅಲೆದಾಡುತ್ತಿವೆ. ಇದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಕಾಡು ಕೋಣ

By

Published : Mar 25, 2019, 6:12 PM IST

ಚಿಕ್ಕಮಗಳೂರು: ಕಾಫಿನಾಡಲ್ಲಿ ಬೃಹತ್ ಗಾತ್ರದ ಎರಡು ಕಾಡು ಕೋಣಗಳು ಮನೆ ಅಂಗಳದಲ್ಲಿ ಪ್ರತ್ಯಕ್ಷವಾಗಿವೆ.

ಮನೆ ಅಂಗಳದಲ್ಲಿ ಕಾಡು ಕೋಣ ಪ್ರತ್ಯಕ್ಷ

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಎಮ್ಮೆಗೊಂಡ ಗ್ರಾಮದ ರಾಜು ಮನೆಯ ಅಂಗಳದಲ್ಲಿ ಬೃಹತ್ ಗಾತ್ರದ ಎರಡು ಕಾಡುಕೋಣಗಳು ಕಾಣಿಸಿಕೊಂಡಿದ್ದು ಮನೆಯ ಮಾಲೀಕರು ಹಾಗೂ ಗ್ರಾಮಸ್ಥರು ಭಯಭೀತರಾಗಿದ್ದಾರೆ.

ನಾಯಿಗಳು ಬೊಗಳಿದರೂ ಕ್ಯಾರೆ ಎನ್ನದೇ ಮನೆಯ ಸುತ್ತ ಮುತ್ತಾ ಅಡ್ಡಾಡಿಕೊಂಡಿವೆ. ಕಳೆದ ಒಂದು ವರ್ಷದಿಂದ ಕಾಡುಕೋಣ ದಾಳಿಗೆ ಗ್ರಾಮಸ್ಥರು ಹೈರಾಣಾಗಿದ್ದು, ಕೊಪ್ಪ ತಾಲೂಕಿನ ಗುಡ್ಡೇತೋಟ, ಕೌವನಹಳ್ಳಿ, ಚನ್ನೇಕಳ್ಳು, ಬಸರೀಕಟ್ಟೆ ಗ್ರಾಮದಲ್ಲಿ ಕಾಡುಕೋಣ ಹಾವಳಿ ಮೀತಿ ಮೀರಿ ಹೋಗಿದೆ. ಕಾಡುಕೋಣ ದಾಳಿಗೆ ಕಳೆದ ಒಂದು ತಿಂಗಳ ಹಿಂದೆ ಗುಡ್ಡೇತೋಟದ ಮಂಜುನಾಥ ಭಟ್ ಎಂಬುವರು ಮೃತಪಟ್ಟಿದ್ದರು.

ABOUT THE AUTHOR

...view details