ಚಿಕ್ಕಮಗಳೂರು: ಇಲ್ಲಿಯವರೆಗೆ ಯಾವುದೇ ಕೊರೊನಾ ಪ್ರಕರಣಗಳಿಲ್ಲದೆ ಗ್ರೀನ್ ಝೋನ್ನಲ್ಲಿದ್ದ ಕಾಫಿ ನಾಡಿನಲ್ಲಿ ಇಂದು ಇಬ್ಬರಿಗೆ ಸೋಂಕು ತಗುಲಿದೆ.
ಚಿಕ್ಕಮಗಳೂರಲ್ಲಿ ಇಬ್ಬರಿಗೆ ಕೊರೊನಾ: ಇಷ್ಟು ದಿನ ನೆಮ್ಮದಿಯಿಂದ ಇದ್ದ ಕಾಫಿನಾಡಲ್ಲಿ ಆತಂಕ - ಚಿಕ್ಕಮಗಳೂರು ಲೇಟೆಸ್ಟ್ ನ್ಯೂಸ್
ಕೊರೊನಾ ಆರಂಭವಾದ 55 ದಿನಗಳಲ್ಲಿ ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪ್ರಕರಣಗಳಿಲ್ಲದೆ ಗ್ರೀನ್ ಝೋನ್ನಲ್ಲಿತ್ತು. ಆದರೆ ಇಂದು ಇಬ್ಬರಿಗೆ ಸೋಂಕು ತಗುಲಿದೆ. ಸೋಂಕಿತರಲ್ಲಿ ಒಬ್ಬರು ಸರ್ಕಾರಿ ವೈದ್ಯರು, ಮತ್ತೊಬ್ಬರು ಗರ್ಭಿಣಿ ಎಂದು ತಿಳಿದು ಬಂದಿದೆ.
ಕೊರೊನಾ ಆರಂಭವಾದ 55 ದಿನಗಳಲ್ಲಿ ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪ್ರಕರಣಗಳಿಲ್ಲದೆ ಗ್ರೀನ್ ಝೋನ್ನಲ್ಲಿತ್ತು. ಆದರೆ ಇಂದು ಇಬ್ಬರಿಗೆ ಸೋಂಕು ತಗುಲಿದೆ. ಸೋಂಕಿತರಲ್ಲಿ ಒಬ್ಬರು ಸರ್ಕಾರಿ ವೈದ್ಯರು, ಮತ್ತೊಬ್ಬರು ಗರ್ಭಿಣಿ ಎಂದು ತಿಳಿದು ಬಂದಿದೆ. ಇವರನ್ನು ಐಸೋಲೇಷನ್ ವಾರ್ಡ್ಗೆ ಶಿಫ್ಟ್ ಮಾಡಲಾಗಿದೆ. ಇವರು ಮೂಡಿಗೆರೆ, ತರೀಕೆರೆ ಮೂಲದವರೆಂದು ತಿಳಿದು ಬಂದಿದೆ.
ಈ ಸಂಬಂಧ ಸೋಂಕಿತರು ವಾಸವಾಗಿದ್ದ ಪ್ರದೇಶವನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದ್ದು, ಆರೋಗ್ಯ ಇಲಾಖೆಯ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ. ಈ ಎರಡು ಕೊರೊನಾ ಪಾಸಿಟಿವ್ ಪ್ರಕರಣದಿಂದ ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.