ಚಿಕ್ಕಮಗಳೂರು:ಜಿಲ್ಲೆಯ ಇಬ್ಬರು ನಕ್ಸಲರನ್ನು ಕೇರಳದಲ್ಲಿ ಎನ್ಕೌಂಟರ್ ಮೂಲಕ ಪೋಲಿಸರು ಹತ್ಯೆ ಮಾಡಿದ್ದಾರೆ.
ಚಿಕ್ಕಮಗಳೂರಿನ ಶ್ರೀಮತಿ ಹಾಗೂ ಸುರೇಶ್ ಅಲಿಯಾಸ್ ಮಹೇಶ್ ಹತ್ಯೆಯಾದ ನಕ್ಸಲರು. ಕೇರಳದ ಪಾಲಕ್ಕಾಡ್ ಅರಣ್ಯ ವ್ಯಾಪ್ತಿಯಲ್ಲಿ ಇಬ್ಬರನ್ನೂ ಹತ್ಯೆ ಮಾಡಲಾಗಿದೆ.

ಶ್ರೀಮತಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಬೆಳಗೋಡು ಮೂಲದವಳಾಗಿದ್ದು, ಸುರೇಶ್ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದವಾನಾಗಿದ್ದಾನೆ. ಸುರೇಶ್ 2004 ರಲ್ಲಿ ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದು, ಶ್ರೀಮತಿ 2008 ರಲ್ಲಿ ನಕ್ಸಲ್ ಚಟುವಕೆಯಲ್ಲಿ ಪಾಲ್ಗೊಂಡಿದ್ದಳು ಎಂದು ತಿಳಿದುಬಂದಿದೆ.
ಈವರೆಗೆ ಶ್ರೀಮತಿ ಅವರ ಮೇಲೆ ಒಟ್ಟು 9 ಕೇಸ್ಗಳು ದಾಖಲಾಗಿವೆ. ಸುರೇಶ್ ಮೇಲೆ 21 ಪ್ರಕರಣಗಳು ದಾಖಲಾಗಿದೆ.ಇವರಿಬ್ಬರ ಎನ್ ಕೌಂಟರ್ ನಂತರ ಅರಣ್ಯ ಭಾಗದಲ್ಲಿ ಕೂಬಿಂಗ್ ಕಾರ್ಯಚರಣೆ ಭರದಿಂದ ಸಾಗಿದ್ದು, ಇತರೆ ನಕ್ಸಲರಿಗಾಗಿ ಕೇರಳ ಪೋಲಿಸರ ಶೋಧ ಕಾರ್ಯ ಮುಂದುವರೆದಿದೆ.