ಚಿಕ್ಕಮಗಳೂರು: ಜಿಲ್ಲೆಯಲ್ಲಿ ಇಂದು ಹೊಸದಾಗಿ ಮತ್ತೆ ಎರಡು ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 16 ಕ್ಕೆ ಏರಿಕೆಯಾಗಿದೆ.
ಕಾಫಿನಾಡಿನಲ್ಲಿ ಮತ್ತಿಬ್ಬರಿಗೆ ಕೊರೊನಾ ಪಾಸಿಟಿವ್ : 16 ಕ್ಕೆ ಏರಿದ ಸೋಂಕಿತರ ಸಂಖ್ಯೆ - ಸೋಂಕಿತರ ಸಂಖ್ಯೆ 16 ಕ್ಕೆ ಏರಿಕೆ
ದೆಹಲಿ ಮೂಲದಿಂದ ಚಿಕ್ಕಮಗಳೂರು ಜಿಲ್ಲೆಗೆ ಬಂದಿದ್ದ ಇಬ್ಬರು ಪುರುಷರಿಗೆ ಕೊರೊನಾ ಪಾಸಿಟಿವ್ ದೃಢವಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 16 ಕ್ಕೆ ಏರಿಕೆಯಾಗಿದೆ.
ಕಾಫಿನಾಡಿನಲ್ಲಿ ಮತ್ತೆರೆಡು ಕೊರೊನಾ ಪಾಸಿಟಿವ್
ದೆಹಲಿ ಮೂಲದಿಂದ ಬಂದಿದ್ದ ಇಬ್ಬರು ಪುರುಷರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಇವರು ಕೊಪ್ಪ ತಾಲೂಕಿನ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಂತರ ಇವರ ಗಂಟಲು ದ್ರವವನ್ನು ಹಾಸನಕ್ಕೆ ಕಳುಹಿಸಿಕೊಡಲಾಗಿತ್ತು. ಇದೀಗ ಸಂಜೆ ವೇಳೆಗೆ ಇಬ್ಬರು ವ್ಯಕ್ತಿಗಳ ಫಲಿತಾಂಶ ಲಭ್ಯವಾಗಿದ್ದು, 38 ವರ್ಷದ ಪುರುಷ ಹಾಗೂ 28 ವರ್ಷದ ಪುರುಷರಲ್ಲಿ ಸೋಂಕು ದೃಢವಾಗಿದೆ.
ಇಬ್ಬರು ವ್ಯಕ್ತಿಗಳಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಇವರಿಬ್ಬರು ವಾಸ ಮಾಡುತ್ತಿದ್ದ ಸುತ್ತಮುತ್ತಲ ಪ್ರದೇಶದ ಜನತೆಯಲ್ಲಿ ಆತಂಕ ಮನೆಮಾಡಿದೆ.