ಚಿಕ್ಕಮಗಳೂರು:ನದಿಗೆ ನೀರು ಕುಡಿಯಲು ಹೋದಾಗ ವಿದ್ಯುತ್ ತಂತಿ ತುಳಿದು ಎರಡು ಜಾನುವಾರುಗಳು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಸುರುಗುಂದ ಗ್ರಾಮದಲ್ಲಿ ಜರುಗಿದೆ.
ನೀರು ಕುಡಿಯಲು ಹೋದಾಗ ತಗುಲಿದ ವಿದ್ಯುತ್ ತಂತಿ: ಎರಡು ಜಾನುವಾರು ಸಾವು - undefined
ನೀರು ಕುಡಿಯಲು ನದಿಗೆ ಹೋದಾಗ ವಿದ್ಯುತ್ ತಂತಿ ಸ್ಪರ್ಶಿಸಿ ಎರಡು ಜಾನುವಾರುಗಳು ಅಸುನೀಗಿವೆ. ಕೊಪ್ಪ ತಾಲೂಕಿನ ಸುರುಗುಂದ ಗ್ರಾಮದ ಸೀತಾ ನದಿಯಲ್ಲಿ ಈ ಅವಘಡ ಸಂಭವಿಸಿದೆ.
ಕೊಪ್ಪ ತಾಲೂಕಿನ ಸುರುಗುಂದ ಗ್ರಾಮದ ಸೀತಾ ನದಿಯ ಮೇಲ್ಭಾಗದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿ ತುಂಡಾಗಿ ನೀರಲ್ಲಿ ಬಿದ್ದಿತ್ತು. ಅದೇ ಸಮಯದಲ್ಲಿ ನೀರು ಕುಡಿಯಲು ಸೀತಾ ನದಿಯ ಬಳಿ ಜಾನುವಾರುಗಳು ಹೋದಾಗ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲಿಯೇ ಮೃತಪಟ್ಟಿವೆ.
ಸುರುಗುಂದ ಗ್ರಾಮದ ಸುರೇಶ್ ಎಂಬುವರಿಗೆ ಸೇರಿದ ಜಾನುವಾರುಗಳು ಸಾವನ್ನಪ್ಪಿದ್ದು, ಅವರ ಕುಟುಂಬಕ್ಕೆ ಇವೇ ಆಧಾರವಾಗಿದ್ದವು. ಆದರೆ ವಿದ್ಯುತ್ ಶಾಕ್ನಿಂದ ಜಾನುವಾರುಗಳು ಮೃತಪಟ್ಟಿದ್ದು, ಮುಂದೆ ಕುಟುಂಬದ ನಿರ್ವಹಣೆ ಹೇಗೆ ಎಂದು ಕಂಗಾಲಾಗಿದ್ದಾರೆ. ಜಯಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಪ್ರಕರಣ ದಾಖಲಿಸಿಕೊಂಡದ್ದಾರೆ.