ಚಿಕ್ಕಮಗಳೂರು: ಕಾಡು ಕುರಿ ಬೇಟೆಯಾಡಿದ ಆರೋಪದ ಹಿನ್ನೆಲೆ ಇಬ್ಬರು ಆರೋಪಿಗಳನ್ನು ಚಿಕ್ಕಮಗಳೂರು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಕಾಡುಕುರಿ ಬೇಟೆ: ಚಿಕ್ಕಮಗಳೂರಲ್ಲಿ ಇಬ್ಬರು ಆರೋಪಿಗಳು ಅಂದರ್ - ಚಿಕ್ಕಮಗಳೂರು ಅರಣ್ಯ ಇಲಾಖೆ ಅಧಿಕಾರಿ ದಾಳಿ
ಕಾಡು ಕುರಿ ಬೇಟೆಯಾಡಿದ ಆರೋಪ ಕೇಳಿ ಬಂದ ಹಿನ್ನೆಲೆ ಮತ್ತೋಡಿ ವಲಯ ಅರಣ್ಯ ಅಧಿಕಾರಿಗಳು ಇಬ್ಬರನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
![ಕಾಡುಕುರಿ ಬೇಟೆ: ಚಿಕ್ಕಮಗಳೂರಲ್ಲಿ ಇಬ್ಬರು ಆರೋಪಿಗಳು ಅಂದರ್ Arrest](https://etvbharatimages.akamaized.net/etvbharat/prod-images/768-512-04:56:33:1597836393-kn-ckm-02-forest-dalli-av-7202347-19082020165452-1908f-1597836292-544.jpg)
Arrest
ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಬಾಳೆಕೊಪ್ಪದ ಸಂಜಯ್ ಹಾಗೂ ಪ್ರವೀಣ್ ಎಂಬುವರನ್ನು ಕಾಡು ಕುರಿ ಬೇಟೆಯಾಡಿದ ಆರೋಪ ಕೇಳಿ ಬಂದ ಹಿನ್ನೆಲೆ ಮತ್ತೋಡಿ ವಲಯ ಅರಣ್ಯ ಅಧಿಕಾರಿಗಳು ಅವರನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
1972 ರ ವನ್ಯಜೀವಿ ಸಂರಕ್ಷಣಾ ಕಾಯ್ಡೆಯಡಿ ಇವರನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ ಎಲ್ಲಾ ವಸ್ತುಗಳನ್ನು ವಶಕ್ಕೆ ಪಡೆದುಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.