ಕರ್ನಾಟಕ

karnataka

ETV Bharat / state

ಮಲೆನಾಡಲ್ಲಿ ಮುಂಗಾರು ಮಳೆಯಾರ್ಭಟ: ಅಪಾಯದ ಮಟ್ಟದಲ್ಲಿ ತುಂಗೆಯ ಹರಿವು - ತುಂಗಾನದಿ ಹರಿವಿನ ಪ್ರಮಾಣ

ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಇಲ್ಲಿನ ತುಂಗಾನದಿ ಹರಿವಿನ ಮಟ್ಟ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಈಗಾಗಲೇ ಸ್ಥಳಕ್ಕೆ ಎನ್​ಡಿಆರ್​ಎಫ್​​ ತಂಡ ಆಗಮಿಸಿದೆ.

tunga-rivers-water-flow-increasing
ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ

By

Published : Aug 7, 2020, 7:11 PM IST

ಚಿಕ್ಕಮಗಳೂರು : ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಶೃಂಗೇರಿ ತಾಲೂಕಿನಲ್ಲಿ ಇಂದು ಬೆಳಗ್ಗೆಯಿಂದ ವರುಣ ಅಬ್ಬರಿಸುತ್ತಿದ್ದಾನೆ.

ತುಂಗಾ ನದಿ ಹರಿವಿನ ಮಟ್ಟ ಹೆಚ್ಚಾಗುತ್ತಿದ್ದು, ಅಪಾಯದ ಮಟ್ಟ ಮೀರಿ ಹರಿಯಲು ಪ್ರಾರಂಭಿಸಿದೆ. ಗಾಂಧಿ ಮೈದಾನದಲ್ಲಿರುವ ಅಂಗಡಿಗಳು ಸಂಪೂರ್ಣ ಮುಳುಗಡೆಯಾಗಿವೆ. ಅಕ್ಕಪಕ್ಕದ ರಸ್ತೆಗಳು ಕೂಡ ಜಲಾವೃತವಾಗಿದೆ.

ಮಳೆನೀರಲ್ಲಿ ಆವೃತವಾಗಿರುವ ಪ್ರದೇಶ

ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಜನರು ಮನೆಯಿಂದ ಹೊರ ಬರುವುದಕ್ಕೆ ಭಯ ಪಡುವ ಪರಿಸ್ಥಿತಿ ಈ ಭಾಗದಲ್ಲಿದೆ. ಶಾರದಾ ಬೀದಿಯ ಅಕ್ಕಪಕ್ಕದ ರಸ್ತೆಗಳಿಗೆ ಜಲ ದಿಗ್ಬಂಧನ ಹಾಕಿದೆ. ಶೃಂಗೇರಿಯ ನದಿ ತಟದ ಮನೆಗಳಿಗೆ ನೀರು ನುಗ್ಗಲು ಶುರುವಾಗಿದೆ.

ಈಗಾಗಲೇ ಈ ಭಾಗಕ್ಕೆ ಎನ್​ಡಿಆರ್​ಎಫ್​ ತಂಡದ ಸಿಬ್ಬಂದಿ ಹಾಜರಾಗಿದ್ದು, ಯಾವುದೇ ರೀತಿಯ ಅಹಿತಕರ ಘಟನೆ ನಡೆದರೆ ತಕ್ಷಣದ ಕಾರ್ಯಾಚರಣೆ ಕೈಗೊಳ್ಳಲು ಬೋಟ್ ವ್ಯವಸ್ಥೆ ಕೂಡ ಮಾಡಿಕೊಳ್ಳಲಾಗಿದೆ.

ABOUT THE AUTHOR

...view details