ಚಿಕ್ಕಮಗಳೂರು: ಕಳೆದ 4 ದಿನಗಳಿಂದ 6ರನೇ ವೇತನ ಜಾರಿಗೆ ಆಗ್ರಹಿಸಿ ಕೆಎಸ್ಆರ್ಟಿಸಿ ನೌಕರರು ಹಮ್ಮಿಕೊಂಡಿರುವ ಮುಷ್ಕರ ಹಿನ್ನೆಲೆ ಚಿಕ್ಕಮಗಳೂರು ವಿಭಾಗದ 25 ಮಂದಿ ಸಾರಿಗೆ ನೌಕರರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಕೆಎಸ್ಆರ್ಟಿಸಿ ನೌಕರರ ಮುಷ್ಕರ: ಚಿಕ್ಕಮಗಳೂರು ವಿಭಾಗದಿಂದ 25 ಮಂದಿ ವರ್ಗಾವಣೆ - ಚಿಕ್ಕಮಗಳೂರು
ಕೆಎಸ್ಆರ್ಟಿಸಿ ನೌಕರರು ಹಮ್ಮಿಕೊಂಡಿರುವ ಮುಷ್ಕರ ಹಿನ್ನೆಲೆ ಚಿಕ್ಕಮಗಳೂರು ವಿಭಾಗದ 25 ಮಂದಿ ಸಾರಿಗೆ ನೌಕರರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಚಿಕ್ಕಮಗಳೂರು ವಿಭಾಗದಿಂದ ಪುತ್ತೂರು ವಿಭಾಗಕ್ಕೆ ಈ ನೌಕರರನ್ನು ವರ್ಗಾವಣೆ ಮಾಡಲಾಗಿದೆ.
ಚಿಕ್ಕಮಗಳೂರು ವಿಭಾಗದಿಂದ 25 ಮಂದಿ ವರ್ಗಾವಣೆ
21 ಚಾಲಕ ಹಾಗೂ ನಾಲ್ವರು ನಿರ್ವಾಹಕರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದ್ದು, ಚಿಕ್ಕಮಗಳೂರು ವಿಭಾಗದಿಂದ ಪುತ್ತೂರು ವಿಭಾಗಕ್ಕೆ ಈ ನೌಕರರನ್ನು ವರ್ಗಾವಣೆ ಮಾಡಲಾಗಿದೆ. ಇಬ್ಬರು ಕಿರಿಯ ಸಹಾಯಕರು, ಇಬ್ಬರು ಮೆಕ್ಯಾನಿಕ್ಗಳ ವರ್ಗಾವಣೆ ಸಹ ಆಗಿದ್ದು, ಕೆಎಸ್ಆರ್ಟಿಸಿ ಮುಖ್ಯ ಸಂಚಾಲಕರು ಈ ಆದೇಶ ಹೊರಡಿಸಿದ್ದಾರೆ.