ಚಿಕ್ಕಮಗಳೂರು:ಚಿಕ್ಕಮಗಳೂರು ತಾಲೂಕಿನಮುತ್ತೋಡಿ ಅಭಯಾರಣ್ಯದಲ್ಲಿ ಸಫಾರಿಗೆ ಬಂದ ಪ್ರವಾಸಿಗರಿಗೆ ಹುಲಿರಾಯ ದರ್ಶನ ನೀಡಿದ್ದು, ಇದರ ವಿಡಿಯೋ ಸಖತ್ ವೈರಲ್ ಆಗಿದೆ.
ಸಫಾರಿ ವಾಹನದಲ್ಲಿ ತೆರಳುತ್ತಿದ್ದಾಗ ನಡು ರಸ್ತೆಯ ಮೇಲೆ ಹುಲಿ ಕಾಣಿಸಿಕೊಂಡಿದೆ. ಹುಲಿ ನೋಡಿದ ಪ್ರವಾಸಿಗರು ಫೋಟೋ ಕ್ಲಿಕ್ಕಿಸಿ, ವಿಡಿಯೋ ಚಿತ್ರೀಕರಿಸಿದ್ದಾರೆ. ಈ ವಿಡಿಯೋದಲ್ಲಿ ಹುಲಿ ತನ್ನ ಪಾಡಿಗೆ ತಾನು ಹೆಜ್ಜೆ ಇಡುತ್ತ ಸಾಗುವುದು ಕಂಡು ಬರುತ್ತದೆ.
ಸಫಾರಿ ವೇಳೆ ಪ್ರವಾಸಿಗರಿಗೆ ಹುಲಿರಾಯನ ದರ್ಶನ ಇದನ್ನೂ ಓದಿ:Viral Video: ವ್ಹಾವ್! ಜಿಂಕೆಯ ಅದ್ಭುತ ಜಿಗಿತ ನೋಡಿ
ಕಾಡಿನ ಮಧ್ಯೆ ಇರುವ ಹುಲಿ ಪ್ರವಾಸಿಗರಿಗೆ ಕಾಣಸಿಗುವುದೇ ಅಪರೂಪವಾಗಿದೆ. ಹೀಗಾಗಿ ತಮಗೆ ಹುಲಿರಾಯ ದರ್ಶನ ನೀಡಿದ್ದಕ್ಕೆ ಪ್ರವಾಸಿಗರು ಸಫಾರಿ ಬಂದಿದ್ದಕ್ಕೂ ಸಾರ್ಥಕವಾಯಿತು ಎಂದು ಸಂತೋಷ ಪಟ್ಟಿದ್ದಾರೆ.
ಜಾಹೀರಾತು- ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ