ಚಿಕ್ಕಮಗಳೂರು:ಜಿಲ್ಲೆಯಲ್ಲಿ ಅನ್ಲಾಕ್ ಘೋಷಣೆಯಾಗುತ್ತಿದ್ದಂತೆ ಪ್ರವಾಸಿತಾಣಗಳು ಸಹ ಪ್ರವಾಸಿಗರಿಂದ ತುಂಬಿಕೊಳ್ಳುತ್ತಿವೆ. ಇಲ್ಲಿನ ಚಾರ್ಮಾಡಿ ಘಾಟ್ನಲ್ಲಿನ ಜಲಪಾತಗಳಿಗೆ ಮರುಜೀವ ಬಂದಿದ್ದು, ಪ್ರವಾಸಿಗರು ಮುಗಿಬಿದ್ದಿದ್ದಾರೆ. ಲಾಕ್ಡೌನ್ ಸಡಿಲ ಆಗುತ್ತಿದ್ದಂತೆ ಪ್ರವಾಸಿಗರು ಚಾರ್ಮಾಡಿಯ ಸೌಂದರ್ಯ ಸವಿಯಲು ಆಗಮಿಸಿದ್ದಾರೆ. ಪ್ರವಾಸಿಗರು ವೀಕೆಂಡ್ನಲ್ಲಿ ಮೋಜು ಮಸ್ತಿ ಮಾಡುತ್ತಿದ್ದಾರೆ.
ಚಾರ್ಮಾಡಿ ಜಲಪಾತಗಳ ಬಳಿ ಜನ ಹಾಗೂ ವಾಹನ ದಟ್ಟಣೆ ಹೆಚ್ಚಾಗಿ ಕಂಡುಬರುತ್ತಿದೆ. ಅಲ್ಲದೆ, ಕೊರೊನಾ ನಿಯಮಗಳನ್ನು ಪ್ರವಾಸಿಗರು ಗಾಳಿಗೆ ತೂರಿದ್ದಾರೆ. ಮಾಸ್ಕ್ ಇಲ್ಲದೆ ಅಂತರ ಕಾಪಾಡಿಕೊಳ್ಳದೆ ಕೊರೊನಾ ಭಯ ಮರೆತ್ತಿದ್ದಾರೆ.
ಚಾರ್ಮಾಡಿ, ಮುಳ್ಳಯ್ಯನಗಿರಿ ಅಂದ ಸವಿಯಲು ಪ್ರವಾಸಿಗರ ದೌಡು ಮುಳ್ಳಯ್ಯನಗಿರಿ ಬೆಟ್ಟದಲ್ಲೂ ಪ್ರವಾಸಿಗರು
ಇದರ ಜೊತೆಗೆ ಮುಳ್ಳಯ್ಯನಗಿರಿ ಬೆಟ್ಟದಲ್ಲೂ ಪ್ರವಾಸಿಗರ ದಂಡು ಕಂಡುಬಂದಿದೆ. ಪ್ರಕೃತಿ ಸೌಂದರ್ಯ ಸವಿಯಲು ಬೆಟ್ಟ ಏರುತ್ತಿರುವ ಪ್ರವಾಸಿಗರು ಕೊರೊನಾ ನಿಯಮ ಮರೆತಿದ್ದಾರೆ. ಇಲ್ಲಿಯೂ ಮಾಸ್ಕ್ ಧರಿಸದೆ ಹಲವು ಪ್ರವಾಸಿಗರು ಓಡಾಡುತ್ತಿರುವುದು ಕಂಡುಬಂದಿದೆ. ಜೊತೆಗೆ ಬೆಟ್ಟದ ಕೆಳಗಿನಿಂದಲೂ ವಾಹನಗಳು ಸಾಲುಗಟ್ಟಿ ನಿಂತಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.
ಸ್ಥಳದಲ್ಲಿ ತುಂತುರು ಮಳೆಯಾಗುತ್ತಿದ್ದು, ಮೋಡ ಕವಿ ವಾತಾವರಣ ಪ್ರವಾಸಿಗರಿಗೆ ಮುದನೀಡುತ್ತಿದೆ. ಆದರೆ ಪ್ರವಾಸಿಗರು ಮಾತ್ರ ನಿಯಮ ಪಾಲಿಸದೆ ಅಸಡ್ಡೆ ತೋರುತ್ತಿರುವುದು ನಿಜಕ್ಕೂ ಬೇಶರದ ಸಂಗತಿಯಾಗಿದೆ.
ಓದಿ:ಕಾಡ್ತಿದೆ ನೆಟ್ವರ್ಕ್ ಸಮಸ್ಯೆ.. ಎತ್ತರದ ಪ್ರದೇಶದಲ್ಲಿ ಶೆಡ್ ನಿರ್ಮಿಸಿಕೊಂಡ ವಿದ್ಯಾರ್ಥಿಗಳು