ಚಿಕ್ಕಮಗಳೂರು: ಜಿಲ್ಲೆಯಲ್ಲಿ ಪ್ರವಾಸಿಗರ ಜೀಪ್ವೊಂದು ಆಕಸ್ಮಿಕವಾಗಿ 300 ಅಡಿ ಆಳದ ಕಂದಕಕ್ಕೆ ಬಿದ್ದಿದ್ದು, ಅದೃಷ್ಟವಶಾತ್ ಅವಘಡ ಜರುಗಿದ ಸಮಯದಲ್ಲಿ ಜೀಪ್ನಲ್ಲಿ ಯಾರೂ ಇರಲಿಲ್ಲ.
ಜಿಲ್ಲೆಯ ಕೊಪ್ಪ ತಾಲೂಕಿನ ಬಸರೀಕಟ್ಟೆಯ ಸಮೀಪವಿರುವ ಕ್ಯಾತನ ಮಕ್ಕಿ ಗ್ರಾಮದ ಬಳಿ ಈ ಘಟನೆ ನಡೆದಿದ್ದು, ಶೃಂಗೇರಿ ಮೂಲದ ಪ್ರವಾಸಿಗರು ಕ್ಯಾತನ ಮಕ್ಕಿಗೆ ಬಂದಿದ್ದರು. ಜೀಪ್ ನಿಲ್ಲಿಸಿ ಪ್ರಕೃತಿ ಸೌಂದರ್ಯವನ್ನು ಸವಿಯಲು ಕೆಳಗೆ ಇಳಿದಾಗ ಜೀಪ್ನ ಗೇರ್ ಸ್ಲಿಪ್ ಆಗಿ ಈ ಘಟನೆ ನಡೆದಿದೆ.