ಚಿಕ್ಕಮಗಳೂರು :ಡ್ರಗ್ಸ್ ಪ್ರಕರಣದಲ್ಲಿ ಜಮೀರ್ ಅಹ್ಮದ್ ಪಾತ್ರ ಏನೆಂಬುದು ತನಿಖೆ ಬಳಿಕ ಗೊತ್ತಾಗಬೇಕು ಎಂದು ಪ್ರವಾಸೋದ್ಯಮ ಸಚಿವ ಸಿ ಟಿ ರವಿ ಹೇಳಿದ್ದಾರೆ.
ಡ್ರಗ್ಸ್ ಪ್ರಕರಣದಲ್ಲಿ ಜಮೀರ್ ಅಹ್ಮದ್ ಪಾತ್ರ ತನಿಖೆ ಬಳಿಕ ಗೊತ್ತಾಗಬೇಕು.. ಸಚಿವ ಸಿ ಟಿ ರವಿ - ಚಿಕ್ಕಮಗಳೂರು ಸುದ್ದಿ
ಜಮೀರ್ ಅವರದ್ದೇ ಕ್ಷೇತ್ರದ ಕೊರೊನಾ ವಾರಿಯರ್ ಮೇಲೆ ಹಲ್ಲೆ ಮಾಡಿದವರಿಗೆ ಬೆಂಬಲಿಸಿರುವುದು, ಸನ್ಮಾನ ಮಾಡಿರುವುದು ಗಂಭೀರವಾಗಿ ತೆಗೆದುಕೊಳ್ಳಬೇಕಾದ ವಿಷಯ. ಅದು ತಾತ್ಕಾಲಿಕ ಶ್ರೇಯಸ್ಸು ತರಬಹುದು, ಕಳ್ಳನಾಯಕನಾಗಿ ಉಳಿಯಲು ಕಾರಣವಾಗುತ್ತೆ..
![ಡ್ರಗ್ಸ್ ಪ್ರಕರಣದಲ್ಲಿ ಜಮೀರ್ ಅಹ್ಮದ್ ಪಾತ್ರ ತನಿಖೆ ಬಳಿಕ ಗೊತ್ತಾಗಬೇಕು.. ಸಚಿವ ಸಿ ಟಿ ರವಿ Tourism Minister CT Ravi Statement about Zamir's role in the drug case](https://etvbharatimages.akamaized.net/etvbharat/prod-images/768-512-8713072-697-8713072-1599477817556.jpg)
ಜಿಲ್ಲೆಯ ಎನ್‌ಆರ್‌ಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಜಿ ಮತ್ತು ಡಿಜೆಹಳ್ಳಿ ಪ್ರಕರಣದಲ್ಲಿ ಅಪರಾಧಿಗಳ ಪರ ನಿಂತ ನಿಲುವು, ಸಮಾಜಘಾತುಕ ಶಕ್ತಿಗಳಿಗೆ ಬೆಂಬಲಿಸುವ ರೀತಿ ತೋರುತ್ತದೆ. ಜಮೀರ್ ಅವರದ್ದೇ ಕ್ಷೇತ್ರದ ಕೊರೊನಾ ವಾರಿಯರ್ ಮೇಲೆ ಹಲ್ಲೆ ಮಾಡಿದವರಿಗೆ ಬೆಂಬಲಿಸಿರುವುದು, ಸನ್ಮಾನ ಮಾಡಿರುವುದು ಗಂಭೀರವಾಗಿ ತೆಗೆದುಕೊಳ್ಳಬೇಕಾದ ವಿಷಯ. ಅದು ತಾತ್ಕಾಲಿಕ ಶ್ರೇಯಸ್ಸು ತರಬಹುದು, ಕಳ್ಳನಾಯಕನಾಗಿ ಉಳಿಯಲು ಕಾರಣವಾಗುತ್ತೆ.
ಸಾರ್ವಜನಿಕ ಬದುಕಿನಲ್ಲಿರುವವರು ಸೌಹರ್ದತೆಗೆ ಒತ್ತು ನೀಡಬೇಕು. ಜಮೀರ್ ಏನೆಂದು ಅವರೇ ಯೋಚಿಸಲಿ. ಡ್ರಗ್ಸ್ ಪ್ರಕರಣದಲ್ಲಿ ಜಮೀರ್ ಪಾತ್ರ ಏನೆಂಬುದು ತನಿಖೆ ಬಳಿಕ ಗೊತ್ತಾಗಬೇಕು ಎಂದರು.