ಚಿಕ್ಕಮಗಳೂರು:ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿರುವ ಚಾರ್ಮಾಡಿ ಘಾಟಿಯಲ್ಲಿ ನಿರಂತರವಾಗಿ ಭೂಕುಸಿತ ಸಂಭವಿಸುತ್ತಿರುವ ಹಿನ್ನೆಲೆ ಇಂದು ಮತ್ತು ನಾಳೆ ಚಾರ್ಮಾಡಿ ಘಾಟಿಯಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದೆ.
ಚಾರ್ಮಾಡಿ ಘಾಟಿ ಬಂದ್: ಆಸ್ಪತ್ರೆಗೆ ತೆರಳಲಾಗದೆ ಆಂಬ್ಯಲೆನ್ಸ್ನಲ್ಲೇ ರೋಗಿ ವಿಲ ವಿಲ - Charmadi Ghat
ಭಾರಿ ಮಳೆ ಹಿನ್ನೆಲೆ ಮಲೆನಾಡಿನ ಚಾರ್ಮಾಡಿ ಘಾಟಿಯಲ್ಲಿ ನಿರಂತರವಾಗಿ ಭೂ ಕುಸಿತ ಸಂಭವಿಸುತ್ತಿದೆ. ಹೀಗಾಗಿ ಎರಡು ದಿನಗಳ ಕಾಲ ವಾಹನ ಸಂಚಾರ ಬಂದ್ ಮಾಡಲಾಗಿದೆ.
![ಚಾರ್ಮಾಡಿ ಘಾಟಿ ಬಂದ್: ಆಸ್ಪತ್ರೆಗೆ ತೆರಳಲಾಗದೆ ಆಂಬ್ಯಲೆನ್ಸ್ನಲ್ಲೇ ರೋಗಿ ವಿಲ ವಿಲ](https://etvbharatimages.akamaized.net/etvbharat/prod-images/768-512-4077383-thumbnail-3x2-ckm.jpg)
ಚಾರ್ಮಾಡಿ ಘಾಟಿ ಬಂದ್: ಆಸ್ಪತ್ರೆಗೆ ತೆರಳಲಾಗದೆ ರೋಗಿ ಪರದಾಟ
ಚಾರ್ಮಾಡಿ ಘಾಟಿ ಬಂದ್: ಆಸ್ಪತ್ರೆಗೆ ತೆರಳಲಾಗದೆ ರೋಗಿ ಪರದಾಟ
ಮಂಗಳೂರಿಗೆ ತೆರಳಲು ದಾರಿ ಕಾಣದೇ ರೋಗಿಯೊಬ್ಬರು ನರಳಾಡಿದ ಘಟನೆ ಬೆಳಕಿಗೆ ಬಂದಿದೆ. ತುರ್ತು ಚಿಕಿತ್ಸೆಗಾಗಿ ಬಣಕಲ್ ನಿವಾಸಿ ಸಾಧಿಕ್ ಮಂಗಳೂರಿಗೆ ಹೋಗಬೇಕಾಗಿತ್ತು. ಆದರೇ ಚಾರ್ಮಾಡಿ ಘಾಟಿ ಬಂದ್ ಆಗಿರುವ ಕಾರಣ ದಾರಿ ಇರಲಿಲ್ಲ. ಈ ಸಂದರ್ಭದಲ್ಲಿ ಅಲ್ಲಿನ ಸ್ಥಳೀಯರು ಹಾಗೂ ಪೊಲೀಸರ ಸಹಾಯದಿಂದ ಅಂಬುಲೆನ್ಸ್ಗೆ ದಾರಿ ಮಾಡಿಕೊಟ್ಟಿದ್ದು ಸುರಕ್ಷಿತವಾಗಿ ರೋಗಿಯನ್ನು ಮಂಗಳೂರಿಗೆ ಕಳುಹಿಸಿಕೊಟ್ಟಿದ್ದಾರೆ. ಸಾಧಿಕ್ ಈಗ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.