ಚಾಮರಾಜನಗರ:ಹಾಲು ಕರೆದು ಕೊಟ್ಟಿಗೆ ಹೊರಗೆ ಕಟ್ಟಿದ್ದ ಹಸುವನ್ನು ಹುಲಿಯೊಂದು ಎಳೆದೊಯ್ದು ಕೊಂದು ಹಾಕಿದ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ಅರಣ್ಯ ವಲಯದ ಮಗುವಿನಹಳ್ಳಿಯಲ್ಲಿ ನಡೆದಿದೆ.
ಹಸಿವು ನೀಗಿಸಿಕೊಳ್ಳಲು ಹಸು ಎಳೆದೊಯ್ದ ಹುಲಿರಾಯ... ಬೆಚ್ಚಿದ ಗ್ರಾಮಸ್ಥರು - undefined
ಜಮೀನಿನಲ್ಲಿ ಹಾಲು ಕರೆದು, ಕೊಟ್ಟಿಗೆ ಹೊರಗಡೆ ಕಟ್ಟಿದ್ದ ಹಸುವನ್ನು ಹುಲಿ ಎಳೆದೊಯ್ದು ಕೊಂದು ಹಾಕಿರುವ ಘಟನೆ ನಡೆದಿದೆ. ಅಕ್ಕಪಕ್ಕದ ಜಮೀನಿನ ರೈತರ ಕಿರುಚಾಟಕ್ಕೆ ಬೆದರಿ ಬೇಟೆಯನ್ನು ಬಿಟ್ಟು ಹುಲಿ ಕಾಲ್ಕಿತ್ತಿದೆ ಎನ್ನಲಾಗಿದೆ.
ಹಸುವನ್ನು ಎಳೆದೊಯ್ದು ಕೊಂದು ಹಾಕಿದ ಹುಲಿ
ಗ್ರಾಮದ ಪ್ರೇಮ್ ಎಂಬವರು, ಹಸು ಕಳೆದುಕೊಂಡ ರೈತ. ಜಮೀನಿನಲ್ಲಿ ಹಾಲು ಕರೆದು, ಕೊಟ್ಟಿಗೆ ಹೊರಗಡೆ ಕಟ್ಟಿದ್ದ ಹಸುವಿನ ಮೇಲೆ ಹುಲಿ ದಾಳಿ ಮಾಡಿ ಪೊದೆಯೊಳಕ್ಕೆ ಎಳೆದೊಯ್ದಿದೆ. ಅಕ್ಕಪಕ್ಕದ ಜಮೀನಿನ ರೈತರ ಕಿರುಚಾಟಕ್ಕೆ ಬೆದರಿ ಬೇಟೆಯನ್ನು ಬಿಟ್ಟು ಹುಲಿ ಕಾಲ್ಕಿತ್ತಿದೆ ಎನ್ನಲಾಗಿದೆ.
ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ. ಈ ವೇಳೆ ಸೂಕ್ತ ಪರಿಹಾರ ನೀಡಿ, ಹುಲಿ ಉಪಟಳವನ್ನು ತಡೆಯಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.