ಕರ್ನಾಟಕ

karnataka

ETV Bharat / state

ಕಾಫಿ ತೋಟದಲ್ಲಿ ಮತ್ತೆ ಕಾಣಿಸಿಕೊಂಡ ಹುಲಿಹೆಜ್ಜೆ: ಆತಂಕದಲ್ಲಿ ಚಿಕ್ಕಮಗಳೂರು ಜನತೆ - hosalli

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಭಾರತಿ ಬೈಲು ಗ್ರಾಮದಲ್ಲಿ ಕಾಫಿತೋಟದಲ್ಲಿ ಹುಲಿಯ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ಇದರಿಂದ ತೋಟದ ಮಾಲೀಕರು ಹಾಗೂ ಕೆಲಸಗಾರರು ಭಯಭೀತರಾಗಿದ್ದಾರೆ.

Tiger in chikkamagaluru
ಚಿಕ್ಕಮಗಳೂರಲ್ಲಿ ಮತ್ತೆ ಹುಲಿಹೆಜ್ಜೆ: ಆತಂಕದಲ್ಲಿ ಜನತೆ

By

Published : Dec 26, 2019, 2:22 PM IST

ಚಿಕ್ಕಮಗಳೂರು:ಮೂಡಿಗೆರೆ ತಾಲೂಕಿನ ಭಾರತಿ ಬೈಲು ಗ್ರಾಮದಕಾಫಿತೋಟದಲ್ಲಿ ಹುಲಿಯ ಹೆಜ್ಜೆ ಗುರುತು ಪತ್ತೆಯಾಗಿದ್ದು, ತೋಟದ ಮಾಲೀಕರು ಹಾಗೂ ಕೆಲಸಗಾರರು ಭಯಭೀತರಾಗಿದ್ದಾರೆ.

ಕಳೆದ 15 ದಿನಗಳ ಹಿಂದೆ ಇದೇ ಭಾಗದಲ್ಲಿ ಹುಲಿಯ ಹೆಜ್ಜೆ ಗುರುತು ಪತ್ತೆಯಾಗಿತ್ತು. ಇದೀಗ ಮತ್ತೆ ಭಾರತಿ ಬೈಲು, ಹೊಸಳ್ಳಿ, ಬೆಳಗೊಡು ಸುತ್ತಮುತ್ತಲ ಗ್ರಾಮದಲ್ಲಿ ಹೆಜ್ಜೆ ಗುರುತುಗಳು ಕಂಡುಬಂದಿರುವುದರಿಂದ ಈ ಭಾಗದ ಜನರಲ್ಲಿ ಆತಂಕ ಮನೆಮಾಡಿದೆ.

ಕೂಡಲೇ ಅರಣ್ಯ ಇಲಾಖೆಗೆ ಸ್ಥಳೀಯರು ಸುದ್ದಿಮುಟ್ಟಿಸಿದ್ದಾರೆ. ವಿಷಯ ತಿಳಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇದು ಹುಲಿಯ ಹೆಜ್ಜೆ ಗುರುತು ಎಂಬುದು ಖಾತರಿಯಾಗಿದೆ.

ABOUT THE AUTHOR

...view details