ಚಿಕ್ಕಮಗಳೂರು: ಮಲೆನಾಡಿನ ಈ ಪುಟ್ಟ ಪೋರನ ಸಾಧನೆ ಕೇಳಿದ್ರೆ ನೀವು ಅಬ್ಬಾ ಅಂತ ಬಾಯಿ ಮೇಲೆ ಬೆರಳು ಇಟ್ಕೋತ್ತೀರಾ.. 2 ವರ್ಷ 11 ತಿಂಗಳ ಬಾಲಕ ಎಸ್.ಭುವನ್ ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ನಲ್ಲಿ 1 ರಿಂದ 20 ನಂಬರ್ಸ್ ಕೇಳಿದ್ರೆ ಪಟಪಟ ಅಂತ ಹೇಳ್ತಾನೆ. ಅಷ್ಟೇ ಯಾಕೆ.. ನಮ್ಮ ಜ್ಞಾನಪೀಠ ಪ್ರಶಸ್ತಿ ವಿಜೇತರ ಹೆಸರು ಹೇಳು ಅಂದ್ರೇ ಒಬ್ಬರ ಹೆಸರನ್ನೂ ಮಿಸ್ ಮಾಡ್ದೇ ಹೇಳ್ತಾನೆ. ತನ್ನ ಈ ಪ್ರತಿಭೆಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆ ಮಾಡಿದ್ದಾನೆ.
ಚಿಕ್ಕಮಗಳೂರು ತಾಲೂಕಿನ ನಿವಾಸಿಗಳಾದ ಗೌಡನಹಳ್ಳಿ ಗ್ರಾಮದ ಶಿವ ಮತ್ತು ದೀಪಿಕಾ ದಂಪತಿಯ ಪುತ್ರ ಎಸ್.ಭುವನ್. ಈತನಿಗಿನ್ನೂ 3 ವರ್ಷ ಸಹ ತುಂಬಿಲ್ಲ. ಈಗಾಗಲೇ 1 ರಿಂದ 20 ನಂಬರ್ಸ್, 1 ಮತ್ತು 2 ಟೇಬಲ್ಸ್ ಮತ್ತು ತಿಂಗಳುಗಳನ್ನು ಹೇಳಿ ಎಲ್ಲರನ್ನೂ ಬೆರಗಾಗುವಂತೆ ಮಾಡಿದ್ದಾನೆ.