ಚಿಕ್ಕಮಗಳೂರು: ಆಯುಧ ಪೂಜೆಗೆ ಎಂದು ಕೆರೆಯಲ್ಲಿ ಸೈಕಲ್ಗಳನ್ನ ತೊಳೆದು ಈಜಲು ಹೋದ ಮೂವರು ಬಾಲಕರು ನೀರಿನಲ್ಲಿ ಮುಳಗಿ ಮೃತಪಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಆಯುಧ ಪೂಜೆಯಂದೇ ನೀರುಪಾಲಾದ ಚಿಕ್ಕಮಗಳೂರಿನ ಮೂವರು ಬಾಲಕರು! - ಮೂವರು ಬಾಲಕರು ನೀರು ಪಾಲು
ಆಯುಧ ಪೂಜೆಗೆಂದು ಕೆರೆಯಲ್ಲಿ ಸೈಕಲ್ಗಳನ್ನ ತೊಳೆದು ಈಜಲು ಹೋದ ಮೂವರು ಬಾಲಕರು ನೀರಿನಲ್ಲಿ ಮುಳಗಿ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಬಿಳೇಕಲ್ಲಳ್ಳಿ ಗ್ರಾಮದ ಕಂಚಿಕಟ್ಟೆಯಲ್ಲಿ ನಡೆದಿದೆ.
ಬಾಲಕರು ನೀರು ಪಾಲು
ಮುರುಳಿ (15), ಜೀವಿತ್ (14) ಹಾಗೂ ಚಿರಾಗ್ (15) ಮೃತ ಬಾಲಕರು. ಚಿಕ್ಕಮಗಳೂರು ತಾಲೂಕಿನ ಬಿಳೇಕಲ್ಲಳ್ಳಿ ಗ್ರಾಮದ ಕಂಚಿಕಟ್ಟೆ ಕೆರೆಯಲ್ಲಿ ಘಟನೆ ನಡೆದಿದೆ. ಮುರುಳಿ ಹಾಗೂ ಜೀವಿತ್ ಮೃತ ದೇಹ ಪತ್ತೆಯಾಗಿದ್ದು, ಚಿರಾಗ್ ಮೃತ ದೇಹಕ್ಕಾಗಿ ಪೊಲೀಸರು ಹಾಗೂ ಸ್ಥಳೀಯರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
Last Updated : Oct 8, 2019, 11:21 AM IST