ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರಲ್ಲಿ ಪೊಲೀಸರ ಜೀಪನ್ನೇ ಕದ್ದ ಚಾಲಾಕಿ ಕಳ್ಳ... ಮುಂದೇನಾಯ್ತು? - basavanahalli police station jeep stolen news

ಪೊಲೀಸರ ಜೀಪನ್ನೇ ಕಳ್ಳನೋರ್ವ ಕದ್ದುಕೊಂಡು ಹೋಗಿರುವ ಘಟನೆ ನಗರದಲ್ಲಿ ನಡೆದಿದೆ.

police jeep
police jeep

By

Published : Dec 30, 2019, 6:19 PM IST

Updated : Dec 30, 2019, 9:34 PM IST

ಚಿಕ್ಕಮಗಳೂರು: ಪೊಲೀಸರ ಜೀಪನ್ನೇ ಕಳ್ಳನೋರ್ವ ಕದ್ದುಕೊಂಡು ಹೋಗಿರುವ ಘಟನೆ ನಗರದಲ್ಲಿ ನಡೆದಿದೆ.

ಚಿಕ್ಕಮಗಳೂರಿನಲ್ಲಿ ಪೊಲೀಸ್​ ಜೀಪ್​ ಕಳ್ಳತನ

ಚಿಕ್ಕಮಗಳೂರು ನಗರದ ಹನುಮಂತಪ್ಪ ವೃತ್ತದಲ್ಲಿ ಬಸವನಹಳ್ಳಿ ಪೊಲೀಸ್ ಠಾಣೆ ಸಿಬ್ಬಂದಿ ಠಾಣೆಯ ಜೀಪ್ ನಿಲ್ಲಿಸಿ, ಮೆಡಿಕಲ್ ಸ್ಟೋರ್​ಗೆ ಹೋಗಿ ಬರುವಷ್ಟರಲ್ಲಿ ಖದೀಮ ಜೀಪ್​ ಹಾರಿಸಿಕೊಂಡು ಹೋಗಿದ್ದಾನೆ.

ಕಳ್ಳ ಜೀಪನ್ನು ಕಡೂರು ರಸ್ತೆಯ ಮಾರ್ಗವಾಗಿ ತೆಗೆದುಕೊಂಡು ಹೋಗಿದ್ದು, ಏಕಾಂಗಿಯಾಗಿ 5 ಕಿ.ಮೀ. ದೂರ ಪ್ರಯಾಣಿಸಿ ನಂತರ ನಗರದ ಹೊರವಲಯದ ಲಕ್ಯಾ ಕ್ರಾಸ್ ಬಳಿ ಇನ್ನೊಂದು ಕಾರಿಗೆ ಗುದ್ದಿದ್ದಾನೆ. ನಂತರ ರಸ್ತೆಯ ಪಕ್ಕದಲ್ಲಿದ್ದಂತಹ ಕಲ್ಲಿಗೆ ಜೀಪ್ ಗುದ್ದಿದ್ದು, ಜೀಪ್ ಆಫ್ ಆಗಿ ಅಲ್ಲಿಯೇ ನಿಂತಿದೆ.

ಕೂಡಲೇ ಜೀಪ್​ನಿಂದ ಕೆಳಗೆ ಇಳಿದಿರುವ ಕಳ್ಳ, ಕಾಡಿನೊಳಗೆ ಓಡಿ ಹೋಗಿದ್ದಾನೆ. ಈ ಕೃತ್ಯ ಯಾರು ಎಸಗಿದ್ದಾರೆ ಎಂಬುದು ಇಲ್ಲಿಯವರೆಗೂ ತಿಳಿದು ಬಂದಿಲ್ಲ. ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾಡಿನಲ್ಲಿ ಕಳ್ಳನನ್ನು ಹುಡಕುತ್ತಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.

Last Updated : Dec 30, 2019, 9:34 PM IST

ABOUT THE AUTHOR

...view details